Site icon Kannada News-suddikshana

BIG NEWS: ಆಪರೇಷನ್ ಸಿಂದೂರ್ ಇನ್ನೂ ಮುಂದುವರೆದಿದೆ, ಶೀಘ್ರದಲ್ಲೇ ಮಾಹಿತಿ: ವಾಯುಪಡೆ ಮಹತ್ವದ ಮಾಹಿತಿ!

SUDDIKSHANA KANNADA NEWS/ DAVANAGERE/ DATE-11-05-2025

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ಬೆನ್ನಲ್ಲೇ ವಾಯುಪಡೆ ಮಹತ್ವದ ಮಾಹಿತಿ ನೀಡಿದೆ. ಮಾತ್ರವಲ್ಲ, ಆಪರೇಷನ್ ಸಿಂಧೂರ್ ಇನ್ನೂ ನಿಂತಿಲ್ಲ ಎಂದು ಘೋಷಿಸಿದೆ.

ಆಪರೇಷನ್ ಸಿಂಧೂರ್ ಮುಂದುವರಿದಿದ್ದು, ಶೀಘ್ರದಲ್ಲಿ ಮಾಹಿತಿ ನೀಡುವುದಾಗಿ ವಾಯುಪಡೆ ತಿಳಿಸಿದ್ದು, ಪಾಪಿ ಪಾಕಿಸ್ತಾನಕ್ಕೆ ಮಾರಿ ಹಬ್ಬ ಇರುವುದು ಖಚಿತವಾಗಿದೆ.

ಮೇ 12ರ ಸೋಮವಾರ ಭಾರತ ಮತ್ತು ಪಾಕ್ ನಡುವೆ ಕದನ ವಿರಾಮ ಘೋಷಣೆಯಾದ ಬಳಿಕ ಮಾತುಕತೆಗೆ ವೇದಿಕೆ ಸಜ್ಜಾಗಿದ್ದರೂ ವಾಯುಪಡೆ ಆಪರೇಷನ್ ಸಿಂಧೂರ್ ನಿಂತಿಲ್ಲ, ಮುಂದುವರಿದಿದ್ದು, ಆದಷ್ಟು ಬೇಗ ಮಾಹಿತಿ ನೀಡುತ್ತೇವೆ ಎಂದು ಹೇಳಿರುವುದು ಕುತೂಹಲ ಕೆರಳಿಸಿದೆ.

ಭಾರತ-ಪಾಕ್ ಕದನ ವಿರಾಮದ ನಂತರವೂ ಆಪರೇಷನ್ ಸಿಂದೂರ್ ಮುಂದುವರೆದಿದೆ ಎಂದು ಭಾರತೀಯ ವಾಯುಪಡೆ ಹೇಳಿದೆ, ಸರಿಯಾದ ಸಮಯದಲ್ಲಿ ಮಾಹಿತಿ ನೀಡಲಾಗುವುದು ಎಂದಿರುವುದು ನೋಡಿದರೆ ಮತ್ತೊಂದು ಬಿಗ್ ಆಪರೇಷನ್ ಗೆ ವಾಯುಪಡೆ ಸನ್ನದ್ಧವಾಗಿದ್ದು ಪಾಕಿಸ್ತಾನಕ್ಕೆ ಭಯ ಶುರುವಾಗಿದೆ.

ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯ ವಿರುದ್ಧ ಪ್ರತಿದಾಳಿಯಾಗಿ ಪ್ರಾರಂಭಿಸಲಾದ ಆಪರೇಷನ್ ಸಿಂಧೂರ್ ಇನ್ನೂ ಪ್ರಗತಿಯಲ್ಲಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವೆ ಕದನ ವಿರಾಮವನ್ನು ಘೋಷಿಸಿದ ಒಂದು ದಿನದ ನಂತರ.

“ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿರುವುದರಿಂದ, ಸರಿಯಾದ ಸಮಯದಲ್ಲಿ ವಿವರವಾದ ಬ್ರೀಫಿಂಗ್ ಅನ್ನು ನಡೆಸಲಾಗುವುದು. ಪರಿಶೀಲಿಸದ ಮಾಹಿತಿಯ ಊಹಾಪೋಹ ಮತ್ತು ಪ್ರಸರಣದಿಂದ ದೂರವಿರಲು ಐಎಎಫ್ ಎಲ್ಲರನ್ನೂ ಒತ್ತಾಯಿಸುತ್ತದೆ” ಎಂದು ಐಎಎಫ್ ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ ಎಕ್ಸ್‌ನಲ್ಲಿ ಘೋಷಿಸಿದೆ.

Exit mobile version