Site icon Kannada News-suddikshana

ALERT: ಪೋಷಕರೇ ಎಚ್ಚರ ; ‘ಆನ್ ಲೈನ್ ಗೇಮ್’ ವ್ಯಾಮೋಹಕ್ಕೆ ವಿದ್ಯಾರ್ಥಿ ಬಲಿ!

ಹುಬ್ಬಳ್ಳಿ: ಆನ್ ಲೈನ್ ಗೇಮ್ ವ್ಯಾಮೋಹಕ್ಕೆ ವಿದ್ಯಾರ್ಥಿ ಬಲಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ರಾಕೇಶ್ ಶ್ರೀಶೈಲ ಜಂಬಲದಿನ್ನಿ ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯ ಶಿರಡಿ ನಗರದ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಬಿವಿಬಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಕೇಶ್ (21) ಆನ್ ಲೈನ್ ನಲ್ಲಿ ಗೇಮ್ ಅಡುವ ಚಟ ಹೊಂದಿದ್ದನು.

ಆನ್ ಲೈನ್ ಗೇಮ್ ಚಟಕ್ಕೆ ಬಿದ್ದು ಕೊನೆಗೆ ಹಣ ಕೂಡ ಕಳೆದುಕೊಂಡಿದ್ದಾನೆ. ಅಷ್ಟೇ ಅಲ್ಲದೇ ಸಾಲ ಮಾಡಿ ಕೂಡ ಗೇಮ್ ಆಡಿದ್ದಾನೆ. ಕೊನೆಗೆ ಸಾಲ ತೀರಿಸಲಾರದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಒಟ್ಟಿನಲ್ಲಿ ಇತ್ತೀಚೆಗೆ ಮಕ್ಕಳು ಆನ್ ಗೇಮ್ ಚಟಕ್ಕೆ ಅಂಟಿಕೊಳ್ಳುತ್ತಿದ್ದು,ಇದು ಆತಂಕಕಾರಿ ಬೆಳವಣಿಗೆಯಾಗಿದೆ.

Exit mobile version