Site icon Kannada News-suddikshana

ಆನ್ ಲೈನ್ ಗೇಮ್ಸ್ ಗಳ ನಿಷೇಧ: ದಾವಣಗೆರೆ ಜಿಲ್ಲಾ ಎಬಿಜಿಪಿ ಕಾನೂನು ಸಲಹೆಗಾರರ ಸ್ವಾಗತ

online game

SUDDIKSHANA KANNADA NEWS/ DAVANAGERE/DATE:25_08_2025

ದಾವಣಗೆರೆ: ಕೇಂದ್ರ ಸರ್ಕಾರವು ಆನ್ ಲೈನ್ ಗೇಮ್ಸ್ ಗಳನ್ನು ನಿಷೇಧ ಮಾಡಿರುವುದಕ್ಕೆ ದಾವಣಗೆರೆ ಜಿಲ್ಲಾ ಎಬಿವಿಪಿ ಕಾನೂನು ಸಲಹೆಗಾರರು ಸ್ವಾಗತಿಸಿದ್ದಾರೆ.

READ ALSO THIS STORY: ಹಸಿದವರಿಗೆ ಆಹಾರ, ಸಾಲದಿಂದ ಕುಟುಂಬಗಳ ಮುಕ್ತಿ ಕೊಟ್ಟ ಧರ್ಮಸ್ಥಳ: ವಿವಾದ ಸೃಷ್ಟಿಸಿರುವ ನಿಜವಾದ ಶಕ್ತಿಗಳು ಯಾವುವು?

ಆನ್ ಲೈನ್ ಗೇಮ್ಸ್ ಗಳಿಂದ ಬಹಳಷ್ಟು ಕುಟುಂಬಗಳು ನಾಶವಾಗಿವೆ. ವಿದ್ಯಾರ್ಥಿಗಳೆಷ್ಟೋ ಆನ್ಲೈನ್ ಗೀಳಿಗೆ ಬಿದ್ದು ಆರ್ಥಿಕವಾಗಿ ಮಾತ್ರವಲ್ಲ ವಿದ್ಯಾಭ್ಯಾಸದಲ್ಲಿ ಕೂಡ ತೀವ್ರ ಹಾನಿಗೊಳಗಾಗಿದ್ದಾರೆ. ಈ ದಿಶೆಯಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಆನ್ಲೈನ್ ಗೇಮಿಂಗ್ ಬ್ಯಾನ ಮಾಡಲು ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತಾ ಬಂದಿತ್ತು. ಅಲ್ಲದೆ ಗ್ರಾಹಕ ಪಂಚಾಯತ್ ಕರ್ನಾಟಕದಲ್ಲೂ ಶಾಲಾ ಕಾಲೇಜುಗಳಲ್ಲಿ ಆನ್ಲೈನ್ ಗೇಮಿಂಗನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಗಳನ್ನು ಕೂಡ ಹಮ್ಮಿಕೊಂಡಿತ್ತು ಎಂದು ತಿಳಿಸಿದ್ದಾರೆ.

ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆನ್ಲೈನ್ ಗೇಮಿಂಗ್ ಬ್ಯಾನ ಮಾಡಿದ್ದು ಅತ್ಯುತ್ತಮ ದಿಟ್ಟ ನಿರ್ಧಾರ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ದಾವಣಗೆರೆ ಜಿಲ್ಲಾ ಕಾನೂನು ಸಲಹೆಗಾರರಾದ ಹಂಪಾಲಿ ನಾಗಮಣಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಅವಶ್ಯಕ ನಿರ್ಧಾರಗಳಿಂದ ಸಮಾಜದಲ್ಲಿ ಬದಲಾವಣೆಗಳನ್ನು ತರಲು ಸಾಧ್ಯ. ಇದು ನಿರಂತರವಾಗಿ ಸಾಗಲು ಸಮಾಜದ ಜನತೆಯೂ ಗ್ರಾಹಕ ಪಂಚಾಯತಿ ನೊಂದಿಗೆ ಜೋಡಿಸಿಕೊಳ್ಳುವುದು ಅವಶ್ಯಕ. ನಮ್ಮ ಗ್ರಾಹಕ ಚಳುವಳಿಗೆ ಈ ಮೂಲಕ ಜನತೆಯಲ್ಲಿ ಕೋರುವುದೇನೆಂದರೆ ಗ್ರಾಹಕ ಪಂಚಾಯತ್ ನ ಸದಸ್ಯರಾಗಿ ಸಮಾಜದಲ್ಲಿ ಸೂಕ್ತ ಗ್ರಾಹಕ ಹಿತ ನಿರ್ಣಯಗಳಲ್ಲಿ ಸಹಭಾಗಿಗಳಾಗಿ ಎಂದು ತಿಳಿಸಿದ್ದಾರೆ.

Exit mobile version