Site icon Kannada News-suddikshana

46 ಲಕ್ಷ ರೂ. ನಗದು ಸೇರಿ ವಸ್ತುಗಳ ವಶ: ಒಂದೇ ದಿನದಲ್ಲಿ ಏಳು ಕೇಸ್ ದಾಖಲು

SUDDIKSHANA KANNADA NEWS/ DAVANAGERE/ DATE:12-04-2023

ದಾವಣಗೆರೆ (DAVANAGERE): ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಚೆಕ್ ಪೋಸ್ಟ್ (CHECK POST)  ವ್ಯವಸ್ಥೆ ಮಾಡಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸುತ್ತಿದ್ದ ನಗದು ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ವಿವಿಧ ಚೆಕ್ ಪೋಸ್ಟ್ (CHECKPOST) ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ದಾಖಲೆ ಇಲ್ಲದೇ ಸಾಗಿಸುತ್ತಿದ್ದ ನಗದು, ಚಿನ್ನಾಭರಣ ಸೇರಿದಂತೆ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಏಪ್ರಿಲ್ 12 ರ
ಬೆಳಗ್ಗೆ 9 ಗಂಟೆಗೆ ಒಂದು ದಿನದಲ್ಲಿ 7 ಪ್ರಕರಣ ದಾಖಲಿಸಲಾಗಿದೆ.

ಸ್ಟಾಟಿಕ್ ಸರ್ವೆಲೆನ್ಸ್ (ಎಸ್‍ಎಸ್‍ಟಿ) ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದ್ದು, ದಾಖಲೆಯಿಲ್ಲದೇ ಸಾಗಿಸುತ್ತಿದ್ದ 46,01648 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ 32.32 ಲಕ್ಷ ರೂ. ನಗದನ್ನು ಆದಾಯ ತೆರಿಗೆ (INCOME TAX) ಇಲಾಖೆಗೆ ಹಸ್ತಾಂತರಿಸಲಾಗಿದೆ.

ನೀತಿ ಸಂಹಿತೆ ಜಾರಿಗೆ ತಂಡಗಳು ಕಾರ್ಯಪ್ರವೃತ್ತ:

 

ಜಿಲ್ಲೆಯಾದ್ಯಂತ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿವಿಧ ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಒಟ್ಟು 21 ಫ್ಲೈಯಿಂಗ್ ಸ್ಕ್ವಾಡ್, 37 ಎಸ್‍ಎಸ್‍ಟಿ ತಂಡ ಮೂರು ಪಾಳಿಯಲ್ಲಿ
ಕಾರ್ಯನಿರ್ವಹಿಸುತ್ತಿದೆ. 9 ಅಬಕಾರಿ ತಂಡಗಳು ಸಹ ಜಿಲ್ಲೆಯಲ್ಲಿ ನಿಗಾವಹಿಸಿದೆ.

48 ಲಕ್ಷ ರೂ. ಮೌಲ್ಯದ ಇತರೆ ವಸ್ತುಗಳು ವಶ:

145 ಬಂಡಲ್ ಉಳ್ಳ ಪಾತ್ರೆಗಳು ಒಟ್ಟು ಮೌಲ್ಯ 9.26 ಲಕ್ಷ, 66.786 ಕೆಜಿ. ಬೆಳ್ಳಿ ಅಂದಾಜು ಮೌಲ್ಯ 39 ಲಕ್ಷ ರೂ. ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 3.63 ಲಕ್ಷ ರೂ. ಮೌಲ್ಯದ 931.36 ಲೀ. ಮದ್ಯ ಹಾಗೂ 56.11 ಸಾವಿರ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

 

 

 

Exit mobile version