Site icon Kannada News-suddikshana

ನಂಬರ್ ಪ್ಲೇಟ್ ಇಲ್ಲದ ವಾಹನಗಳ ವಿರುದ್ಧ ಸ್ಪೆಷಲ್ ಆಪರೇಷನ್! 25 ಬೈಕ್ ಗಳಿಗೆ ಬಿತ್ತು ಫೈನ್!

SUDDIKSHANA KANNADA NEWS/ DAVANAGERE/ DATE:09-01-2025

ದಾವಣಗೆರೆ: ನಂಬರ್ ಪ್ಲೇಟ್ ಇಲ್ಲದೇ ಮೋಟಾರ್ ಸೈಕಲ್ ಗಳ ಮೇಲೆ ಜಿಲ್ಲಾ ಪೊಲೀಸ್ ಇಲಾಖೆ ನಿಗಾ ವಹಿಸಿದೆ.

ಬೈಕ್ ಹಾಗೂ ಕಾರುಗಳಿಗೆ ನಂಬರ್ ಪ್ಲೇಟ್ ಅಳವಡಿಸದೇ ಚಲಾಯಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ದಂಡ ವಿಧಿಸುವ ಕಾರ್ಯ ನಡೆಯುತ್ತಿದೆ.

ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರ ಸೂಚನೆಯಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ನಗರ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಟ್ರಾಫಿಕ್ ಸಿಪಿಐ ನಲವಾಗಲು ಮಂಜುನಾಥ್ ಅವರ ನೇತೃತ್ವದಲ್ಲಿ ದಾವಣಗೆರೆ ದಕ್ಷಿಣ ಮತ್ತು ಉತ್ತಮ ಟ್ರಾಫಿಕ್ ಸಿಬ್ಬಂದಿಗಳೊಂದಿಗೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.

ನಂಬರ್ ಪ್ಲೇಟ್ ಇಲ್ಲದೇ ಸಂಚಾರಿಸುವ ಮೋಟಾರ್ ಸೈಕಲ್ ಗಳನ್ನು ತಡೆಗಟ್ಟಲು ದಾವಣಗೆರೆ ನಗರದಲ್ಲಿ ವಿಶೇಷ ಕಾರ್ಯಚರಣೆ ನಡೆಸಿ ಸುಮಾರು 25 ಮೋಟಾರ್ ಸೈಕಲ್ ಗಳನ್ನು ಹಿಡಿದು ಹೊಸ ನಂಬರ್ ಪ್ಲೇಟ್ ಗಳನ್ನು ಅಳವಡಿಸಿ ನಂತರ ದಂಡವನ್ನೂ ಸಹ ವಿಧಿಸಲಾಯಿತು. ನಂಬರ್ ಪ್ಲೇಟ್ ರಹಿತವಾಗಿ ವಾಹನಗಳನ್ನು ಚಲಾಯಿಸದಂತೆ ವಾಹನ ಚಾಲಕರು ಮತ್ತು ಮಾಲೀಕರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.

Exit mobile version