Home ದಾವಣಗೆರೆ ನೋವೆಲ್ ಹೋಪ್ ಫೌಂಡೇಶನ್ ವತಿಯಿಂದ ಹೊನ್ನಾಳಿ-ನ್ಯಾಮತಿ ತಾಲೂಕಿನ 1464 ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ
ದಾವಣಗೆರೆಬೆಂಗಳೂರು

ನೋವೆಲ್ ಹೋಪ್ ಫೌಂಡೇಶನ್ ವತಿಯಿಂದ ಹೊನ್ನಾಳಿ-ನ್ಯಾಮತಿ ತಾಲೂಕಿನ 1464 ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ

Share
ಹೊನ್ನಾಳಿ
Share

ದಾವಣಗೆರೆ: ಬೆಂಗಳೂರಿನ ನೋವೆಲ್ ಹೋಪ್ ಫೌಂಡೇಶನ್ ವತಿಯಿಂದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಒಟ್ಟು 14 ಸರ್ಕಾರಿ ಶಾಲೆಗಳ 1464 ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು.

ಹೊನ್ನಾಳಿಗೆ ಫೌಂಡೇಶನ್‌ನ ಸೀನಿಯರ್ ಸಿ.ಎಸ್.ಆರ್ ಎಕ್ಸಿಕ್ಯೂಟಿವ್ ದೀಪಕ್ ಆರ್. ಅವರು ಪ್ರತಿಯೊಂದು ಶಾಲೆಗೂ ಖುದ್ದಾಗಿ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿ ಮಾತನಾಡುತ್ತಾ, “ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಮತ್ತು ಹಾಜರಾತಿ ಹೆಚ್ಚಿಸುವ ಸದುದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ವತಿಯಿಂದ ಟ್ರ್ಯಾಕ್ ಸೂಟ್, ಜ್ಯಾಮಿತಿ ಬಾಕ್ಸ್ ಹಾಗೂ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಶಿಕ್ಷಣದ ಆರ್ಥಿಕ ನೆರವು ನೀಡಲಾಗುವುದು. ಅವಶ್ಯಕತೆ ಇರುವ ಕಡೆ ಶೌಚಾಲಯ ನಿರ್ಮಾಣ ಮತ್ತು ಅತಿಥಿ ಶಿಕ್ಷಕರ ನೇಮಕಾತಿಗೂ ಸಂಸ್ಥೆ ಒತ್ತು ನೀಡಲಿದೆ” ಎಂದು ತಿಳಿಸಿದರು.

ನಂತರ ಹೊನ್ನಾಳಿಯ ಮಹಿಳೆಯರ ಮತ್ತು ಅಂಗವಿಕಲರ ಸೇವಾ ಸಂಸ್ಥೆಯ ಅಧ್ಯಕ್ಷರಾದ ಕುಮಾರಿ ಶೈಲಜಾ ಕೆ.ಎಂ. ಮಾತನಾಡಿ, ಫೌಂಡೇಶನ್‌ನ ಈ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿ ಧನ್ಯವಾದ ಅರ್ಪಿಸಿದರು.

ದೀಟೂರಿನ ನಿಸರ್ಗ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಸಂತೋಷ ಕೆ.ಎ. ಅವರು ಬ್ಯಾಗ್ ವಿತರಣೆಯ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಚೀಲಾಪುರ, ತ್ಯಾಗದಕಟ್ಟೆ, ದಿಡಗೂರು, ಹರಳಹಳ್ಳಿ, ಸುಂಕದಕಟ್ಟೆ ಸೇರಿದಂತೆ 14 ಶಾಲೆಗಳ ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗ, ಎಸ್.ಡಿ.ಎಂ.ಸಿ ಅಧ್ಯಕ್ಷರು, ಗ್ರಾಮಸ್ಥರು ಹಾಗೂ ಸಂಸ್ಥೆಯ ಸದಸ್ಯರಾದ ಮಂಜುನಾಥ ಒಡೆಯರ್, ಸುರೇಂದ್ರನಾಥ ಒಡೆಯರ್, ಕಾವ್ಯ, ರಾಜು, ಸಂಜೀವಕುಮಾರ ಮತ್ತುಎಲ್ಲಾ ಶಾಲೆಯ ಮುಖ್ಯ ಗುರುಗಳು, ಸಹ ಶಿಕ್ಷಕರು, ಸಿಬ್ಬಂದಿ ವರ್ಗದವರು ಹರ್ಷವನ್ನು ವ್ಯಕ್ತಪಡಿಸಿದರು.

Share

Leave a comment

Leave a Reply

Your email address will not be published. Required fields are marked *