Home ದಾವಣಗೆರೆ ಜಗಳೂರು ಬೆಸ್ಕಾಂ ವ್ಯಾಪ್ತಿಯಲ್ಲಿ ನಾಳೆ (ಮಾ. 26) ವಿದ್ಯುತ್ ವ್ಯತ್ಯಯ
ದಾವಣಗೆರೆಬೆಂಗಳೂರು

ಜಗಳೂರು ಬೆಸ್ಕಾಂ ವ್ಯಾಪ್ತಿಯಲ್ಲಿ ನಾಳೆ (ಮಾ. 26) ವಿದ್ಯುತ್ ವ್ಯತ್ಯಯ

Share
ವಿದ್ಯುತ್
Share

ದಾವಣಗೆರೆ: ಜಗಳೂರು ಬೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ವಿವಿಧ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾರ್ಚ್ 26 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಜಗಳೂರು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ನೀಡಿರುವ ಪ್ರಕಟಣೆಯ ಪ್ರಕಾರ, 66/11 ಕೆವಿ ಬಿಳಿಚೋಡು, ಪಲ್ಲಾಗಟ್ಟೆ ಮತ್ತು ಸೊಕ್ಕೆ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಈ ಕಾಮಗಾರಿ ನಡೆಯಲಿದೆ. ಆದ್ದರಿಂದ ಅಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ಎಲ್ಲಾ ಎನ್.ಜೆ.ವೈ (NJY) ಮತ್ತು ಐ.ಪಿ (IP) ಮಾರ್ಗಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಹಾಗೂ ರೈತ ಬಾಂಧವರು ಈ ವಿದ್ಯುತ್ ವ್ಯತ್ಯಯಕ್ಕೆ ಸಹಕರಿಸಬೇಕೆಂದು ಕೋರಲಾಗಿದೆ.

Share

Leave a comment

Leave a Reply

Your email address will not be published. Required fields are marked *