Site icon Kannada News-suddikshana

ದಾವಣಗೆರೆ ಜಿಲ್ಲೆಯ ವಿವಿಧೆಡೆ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ?

current

SUDDIKSHANA KANNADA NEWS/ DAVANAGERE/DATE:23_08_2025

ದಾವಣಗೆರೆ: 66/11 ಕೆವಿ ಪಲ್ಲಾಗಟ್ಟೆ ವಿ.ವಿ.ಕೇಂದ್ರಕ್ಕೆ ಸಂಬಂಧಿಸಿದ ಎನ್‍ಜೆವೈ ಮತ್ತು ಐ.ಪಿ 11 ಕೆವಿ ಮಾರ್ಗಗಳಲ್ಲಿ ಆಗಸ್ಟ್ 23 ಮತ್ತು 24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

READ ALSO THIS STORY: ರಸ್ತೆ ರಿಪೇರಿಗೆ ದಾವಣಗೆರೆಯ ಆಲೂರಿನಲ್ಲಿ ವಿದ್ಯಾರ್ಥಿನಿ ಏಕಾಂಗಿ ಧರಣಿ: ಇದು ಕಾಂಗ್ರೆಸ್ ಆಡಳಿತಕ್ಕೆ ಹಿಡಿದ ಕೈಗನ್ನಡಿ!
ಇಂದು ವಿದ್ಯುತ್ ವ್ಯತ್ಯಯ

66/11 ಕಾಡಜ್ಜಿ ವಿ.ವಿ. ಕೇಂದ್ರದಿಂದ ಹೊರಡುವ ವಿದ್ಯುತ್ ಮಾರ್ಗದ ಮುಕ್ತತೆಯನ್ನು ತೆಗೆದುಕೊಳ್ಳುವುದರಿಂದ ಆಗಸ್ಟ್ 23 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕಾಡಜ್ಜಿ, ರಾಂಪುರ, ನಾಗರಕಟ್ಟೆ, ಬಸವನಾಳು, ಬಸವನಾಳುಗೊಲ್ಲರಹಟ್ಟಿ, ಬೇತೂರು, ಪುಟಗನಾಳು ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ನಾಳೆ ವಿದ್ಯುತ್ ವ್ಯತ್ಯಯ:

66/11 ಕೆ.ವಿ ಓಬಜ್ಜಿಹಳ್ಳಿ ವಿ.ವಿ ಕೇಂದ್ರದಿಂದ ಹೊರಡುವ ವಿದ್ಯುತ್ ಮಾರ್ಗದಲ್ಲಿ ತುರ್ತುಕಾಮಕಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕಡ್ಲೆಬಾಳು, ಹೊಸಕಡ್ಲೆಬಾಳು, ಅರಸಾಪುರ, ತಳವಾರಹಟ್ಟಿ, ಮಾಗನಹಳ್ಳಿ, ಚಿಕ್ಕ ಓಬಜ್ಜಿಹಳ್ಳಿ, ದೊಡ್ಡ ಓಬಜ್ಜಿಹಳ್ಳಿ, ಬದಿಯಾನಾಯಕನ ತಾಂಡ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Exit mobile version