Site icon Kannada News-suddikshana

ದಾವಣಗೆರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆ. 19, 20ರಂದು ವಿದ್ಯುತ್ ವ್ಯತ್ಯಯ

ವಿದ್ಯುತ್

SUDDIKSHANA KANNADA NEWS/ DAVANAGERE/DATE:18_08_2025

ದಾವಣಗೆರೆ: 66/11 ಕೆವಿ ಸೊಕ್ಕೆ ವಿ.ವಿ.ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಫೀಡರ್ ಗಳ ಜಂಗಲ್ ಕಟಿಂಗ್ ಮತ್ತು ಫೀಡರ್ ಗಳ ಕಾರ್ಯನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 19 ಮತ್ತು 20 ರಂದು
ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಗೆ ಕೆವಿ ಸೊಕ್ಕೆ ವಿ.ವಿ. ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಎನ್‍ಜೆವೈ ಮತ್ತು ಐ.ಪಿ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

READ ALSO THIS STORY: ಬಾಪೂಜಿ ಸಂಸ್ಥೆ ಕಟ್ಟಿದ ಎಸ್ಕೆ ಕೊಟ್ರಬಸಪ್ಪರ ಪ್ರತಿಮೆ ನಿಮ್ಮ ಮನೆ ಮುಂದೆ ಪ್ರತಿಷ್ಠಾಪಿಸಿ: ಎಸ್ಎಸ್ಎಂಗೆ ಯಶವಂತರಾವ್ ಜಾಧವ್ ಸವಾಲ್!
ವಿದ್ಯುತ್ ವ್ಯತ್ಯಯ:

ಬೆ.ವಿ.ಕಂ ವತಿಯಿಂದ ತುರ್ತುಕಾಮಗಾರಿನ್ನು ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸರಸ್ವತಿ ಬಡಾವಣೆ ಎ, ಬಿ ಮತ್ತು ಸಿ ಬ್ಲಾಕ್, ಜೀವನ್ ಭೀಮಾನಗರ, ಚಿಕ್ಕಮಣಿ ದೇವರಾಜ್ ಅರಸ್ ಬಡಾವಣೆ, ಜಯನಗರ ಎ ಅಂಡ್ ಬಿ ಬ್ಲಾಕ್, ಎಸ್.ಎಸ್. ಹೈಟೆಕ್ ಆಸ್ಪತ್ರೆ ರಸ್ತೆ, ಸಾಯಿ ಬಾಬ ದೇವಸ್ಥಾನದ ಸುತ್ತಮುತ್ತ, ಲಕ್ಷ್ಮೀ ಬಡಾವಣೆ ಹಾಗೂ ಸುತ್ತಮತ್ತಲಿನ ಪ್ರದೇಶಗಳು, ಸ್ವಾಮಿ ವಿವೇಕಾನಂದ ಬಡಾವಣೆ, ಎಲ್.ಐ.ಸಿ ಕಾಲೋನಿ, ಆಂಜನೇಯ ಬಡಾವಣೆ, ವಿನಾಯಕ ಬಡಾವಣೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ ಇರಲ್ಲ ವಿದ್ಯುತ್

ಶಾಖಾ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳು ಇರುವುದರಿಂದ ಆಗಸ್ಟ್ 19 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಗೆಯವರೆಗೆ ಆವರಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಹೊನ್ನೂರು, ಬಸವನಾಳ್, ಇಂಡಸ್ಟ್ರಿಯಲ್, ಮಲ್ಲಶೆಟ್ಟಿಹಳ್ಳಿ, ಕಾಡಜ್ಜಿ, ಅವರಗೆರೆ, ಆನಗೋಡು, ಬೇತೂರು, ಪುಟ್ಟಗನಾಳು, ಐಗೂರು, ಚಿಕ್ಕನಹಳ್ಳಿ, ಲಿಂಗದಹಳ್ಳಿ, ರಾಂಪುರ, ಅವರಗೆರೆ, ಬಾಡ ಕ್ರಾಸ್, ಆಂಜನೇಯ ಕಾಟನ್ ಮಿಲ್, ಎಚ್.ಕಲಪನಹಳ್ಳಿ, ಹೊನ್ನೂರು, ಹೊನ್ನೂರು ಗೊಲ್ಲರಹಟ್ಟಿ, ಮಲ್ಲಶೆಟ್ಟಿಹಳ್ಳಿ, ಕಾಡಜ್ಜಿ, ಕರಿಲಕ್ಕನಹಳ್ಳಿ, ಚಮ್ರಬನಹಳ್ಳಿ ಬಸಾಪುರ, ಹೊಸಚಿಕ್ಕನಹಳ್ಳಿ ವಡ್ಡಿನಹಳ್ಳಿ, ಐಗೂರು ಐಗೂರು ಗೊಲ್ಲರಹಟ್ಟಿ, ಲಿಂಗದಹಳ್ಳಿ, ರಾಂಪುರ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Exit mobile version