SUDDIKSHANA KANNADA NEWS/DAVANAGERE/DATE:29_12_2025
ದಾವಣಗೆರೆ: 66/11ಕೆವಿ ಕೆ.ವಿ. ಆನಗೋಡು , 66/11 ಕೆ.ವಿ.ಅತ್ತೀಗೆರೆ ವಿದ್ಯುತ್ ಮಾರ್ಗಗಳಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಡಿಸೆಂಬರ್ 30 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಆನಗೋಡು, ಬುಳ್ಳಾಪುರ, ಬಸವನಗಿರಿ ಬಡಾವಣೆ, ಚಿನ್ನಸಮುದ್ರ, ದೊಡ್ಡರಂಗವ್ವನಹಳ್ಳಿ, ಈಚಗಟ್ಟ, ಗಂಗನಕಟ್ಟೆ, ಹಾಲುವರ್ತಿ, ಹನುಮನಹಳ್ಳಿ, ಹೆಬ್ಬಾಳು, ಜಂಪೇನಹಳ್ಳಿ, ಕೊಗ್ಗನೂರು, ನರಸಿಪುರ, ನೀರ್ಥಡಿ, ನೇರ್ಲಿಗೆ, ಸುಲ್ತಾನಿಪುರ, ಶಿವಪುರ, ಉಳುಪಿನಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಹಾಗೂ 66 ಕೆವಿ ರೈಲ್ವೆ ಟ್ರಾಕ್ಷನ್ ಉಪಕೇಂದ್ರ, ಅತ್ತಿಗೆರೆ, ಕುರ್ಕಿ, ಬಾಡ, ಕಬ್ಬೂರು, ಹೀರೆತೊಗಲೇರಿ, ಗೊಪಾನಾಳು, ಕಂದ್ಗಲ್, ರಾಮಗೊಂಡನಹಳ್ಳಿ, ಕಾಶೀಪುರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.





Leave a comment