Site icon Kannada News-suddikshana

ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ: ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಇರಲ್ಲ ಕರೆಂಟ್

SUDDIKSHANA KANNADA NEWS/ DAVANAGERE/ DATE:30-08-2024

ದಾವಣಗೆರೆ: ಅವರಗೆರೆ ವಿ.ವಿ ಕೇಂದ್ರ ದಿಂದ ಹೊರಡುವ ಎಫ್12-ಚಿಕ್ಕನಹಳ್ಳಿ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿಯನ್ನು ಆ.30 ರಂದು ಕೈಗೊಳ್ಳುವುದರಿಂದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಉಂಟಾಗಲಿದೆ.

ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಬಸಾಪುರ, ಹಳೇ ಚಿಕ್ಕನಹಳ್ಳಿ, ಹೊಸ ಚಿಕ್ಕನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಜನರು ಸಹಕರಿಸುವಂತೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Exit mobile version