SUDDIKSHANA KANNADA NEWS/DAVANAGERE/DATE:29_12_2025
ದಾವಣಗೆರೆ: ಹೊನ್ನಾಳಿ – ನ್ಯಾಮತಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಡಿಸೆಂಬರ್ 30ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ತ್ರೈಮಾಸಿಕ ನಿರ್ವಹಣೆ ಕೆಲಸಗಳಿಗೆ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ಹೊನ್ನಾಳಿಯ 66 ಕೆ.ವಿ ಶಕ್ತಿ ಪರಿವರ್ತಕ, 66 ಕೆ.ವಿ ಸಿಟಿ, 66 ಕೆವಿ ಬ್ರೇಕರ್,11 ಕೆವಿ ಬ್ರೇಕರ್ ಮತ್ತು ಇನ್ನಿತರ ಉಪಕರಣಗಳ ಹಾಟ್‌ಸ್ಪಾಟ್‌ಗಳನ್ನು ಸರಿಪಡಿಸಲಾಗುತ್ತಿದೆ.
ಕೇಂದ್ರದ ಡಿಸಿ ಗ್ರೌಂಡಿಂಗ್ ಅನ್ನು ಸರಿಪಡಿಸಲು ಹೊನ್ನಾಳಿಯಿಂದ ವಿದ್ಯುತ್ ಪೂರೈಕೆಯಾಗುವ ಎಲ್ಲಾ 66 ಕೆವಿ ಮಾರ್ಗಗಳು ಮತ್ತು 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಾದ ನ್ಯಾಮತಿ, ಸವಳಂಗ, ಚೀಲೂರು ಮತ್ತು ಕತ್ತಿಗೆ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ವಿತರಣೆಯಾಗುವ ಎಲ್ಲಾ 11 ಕೆವಿ ಮಾರ್ಗಗಳ ಮಾರ್ಗ ಮುಕ್ತತೆ ಪಡೆಯುತ್ತಿದೆ. ಆದಕಾರಣ ಈ ಮೇಲಿನ ವಿದ್ಯುತ್ ವಿತರಣಾ ಕೇಂದ್ರಗಳಿಂದ ಪೂರೈಕೆಯಾಗುವ ಎಲ್ಲಾ ಗ್ರಾಮಗಳಿಗೆ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ. ಕೆ. ಶ್ರೀನಿವಾಸ್ ಮನವಿ ಮಾಡಿದ್ದಾರೆ.





Leave a comment