SUDDIKSHANA KANNADA NEWS/DAVANAGERE/DATE:12_12_2025
ದಾವಣಗೆರೆ: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರವು ಸುವರ್ಣಾವಕಾಶ ನೀಡಿದೆ. ಯಾರು ಅರ್ಜಿ ಸಲ್ಲಿಸಲು ಅರ್ಹರು ಎಂಬ ಕುರಿತಂತೆ ಮಾಹಿತಿ ನೀಡಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮಾನದಂಡಗಳನ್ನು ವಿಧಿಸಿದೆ.
READ ALSO THIS STORY: ಜಿ. ಆರ್. ಸ್ವಾಮಿನಾಥನ್ ಪದಚ್ಯುತಕ್ಕೆ 100 ಕ್ಕೂ ಹೆಚ್ಚು ಸಂಸದರಿಂದ ಮಹಾಭಿಯೋಗ ಮಂಡನೆ: 50ಕ್ಕೂ ಹೆಚ್ಚು ಮಾಜಿ ನ್ಯಾಯಾಧೀಶರ ಆಕ್ರೋಶ!
ಕರ್ನಾಟಕದಲ್ಲಿ ಹೊಸ ಬಿಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಬಹುದು. ಬೇಕಾದ ದಾಖಲೆಗಳು ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಇಲ್ಲಿದೆ.
ಇ ಶ್ರಮ್ ಕಾರ್ಡ್ ಹೊಂದಿರುವವರು:
- ಕಟ್ಟಡ ಕಾರ್ಮಿಕರು
- ಹೋಟೆಲ್ ಕೆಲಸಗಾರರು
- ಚಾಲಕರು
- ಮುಂತಾದ ಅಸಂಘಟಿತ ವಲಯದ ಕಾರ್ಮಿಕರು
ಅಲೆಮಾರಿ, ಬುಡಕಟ್ಟು ಸಮುದಾಯದವರು:
- ಕೊರಗ
- ಜೇನು ಕುರುಬ
- ದುರ್ಬಲ ಬುಡಕಟ್ಟು ಗುಂಪುಗಳಿಗೆ ಸೇರಿದ ಕುಟುಂಬಗಳು
ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವವರು
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಚಿಕಿತ್ಸೆಗೆ ಬಿಪಿಎಲ್ ಕಾರ್ಡ್ ಅಗತ್ಯವಿರುವ ರೋಗಿಗಳು.
ಅರ್ಜಿ ಸಲ್ಲಿಸಲು ಕೊನೆಯ ದಿನ
31-03-2026
ಬೇಕಾದ ಪ್ರಮುಖ ದಾಖಲೆಗಳು
- ಸಾಮಾನ್ಯ ದಾಖಲೆಗಳು
- ಆಧಾರ್ ಕಾರ್ಡ್,
- ಆದಾಯ, ಜಾತಿ ಪ್ರಮಾಣ ಪತ್ರ
- ವಿಳಾಸ ಪುರಾವೆ
- ಪಾಸ್ ಪೋರ್ಟ್ ಗಾತ್ರದ ಫೋಟೋ
ವಿಶೇಷ ದಾಖಲೆಗಳು:
- ಕಾರ್ಮಿಕರಿಗೆ: 12 ಅಂಕಿಯ ಯುಎಎನ್ (ಇ-ಶ್ರಮ್) ಕಾರ್ಡ್
- ರೋಗಿಗಳಿಗೆ: ವೈದ್ಯಕೀಯ ದೃಢೀಕರಣ ಪತ್ರ
ಅರ್ಜಿ ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕು?
- ಕರ್ನಾಟಕ ಒನ್
- ಗ್ರಾಮ ಒನ್
- ಬೆಂಗಳೂರು ಒನ್
- ನಿಮ್ಮ ಹತ್ತಿರದ ಕೇಂದ್ರಗಳಿಗೆ ಭೇಟಿ ನೀಡಿ
ಸಾಮಾನ್ಯ ವರ್ಗದವರಿಗೆ ಯಾವಾಗ?
ಅನರ್ಹ ಕಾರ್ಡ್ ಗಳ ರದ್ದತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಾಮಾನ್ಯ ವರ್ಗದವರಿಗೂ ಅವಕಾಶ ನೀಡಲಾಗುವುದು.





Leave a comment