ಬಳ್ಳಾರಿ: ಫ್ಲೆಕ್ಸ್ ಗಲಾಟೆ ಸಂಬಂಧ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ನಡುವಿನ ಜ್ವಾಲಾಮುಖಿ ಸ್ಫೋಟಿಸಿದ ಬಳಿಕ ಬಳ್ಳಾರಿ ರಣರಂಗವಾಗಿತ್ತು. ಈಗಾಗಲೇ ಎಸ್ಪಿ ಸೇರಿದಂತೆ ಅಧಿಕಾರಿಗಳ ತಲೆದಂಡ ಆಗಿದೆ. ಈ ನಡುವೆ ಬಳ್ಳಾರಿ ವಲಯ ನೂತನ ಪೊಲೀಸ್ ಉಪ ಮಹಾನಿರೀಕ್ಷಕರಾಗಿ ಡಾ.ಪಿ.ಎಸ್ ಹರ್ಷ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
ಡಾ. ಪಿ. ಎಸ್. ಹರ್ಷಾ ಅವರು ಇಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
ಬಳಿಕ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಕಾನೂನುಬದ್ಧ, ನಿಷ್ಪಕ್ಷಪಾತ ಹಾಗೂ ಕಾನೂನು ಸುವ್ಯವಸ್ಥೆಯನ್ನು ಭದ್ರ-ಬುನಾದಿಯಾಗಿಸಲು ಸರ್ಕಾರ ಮತ್ತು ಹಿರಿಯ ಅಧಿಕಾರಿಗಳ ನಿರ್ದೇಶನ ನೀಡಿದೆ ಎಂದು
ತಿಳಿಸಿದರು.
ಬಳ್ಳಾರಿ ವಲಯದ ಬಳ್ಳಾರಿ, ವಿಜಯನಗರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಪ್ರಮುಖ ಮತ್ತು ಶಾಂತಿಪ್ರಿಯ ಜಿಲ್ಲೆಗಳಾಗಿದ್ದು, ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸಲು ಹಾಗೂ ಜನಸ್ನೇಹಿ ಆಡಳಿತ ನೀಡಲು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಹೇಳಿದರು.





Leave a comment