SUDDIKSHANA KANNADA NEWS/DAVANAGERE/DATE:08_12_2025
ನವದೆಹಲಿ: ವಂದೇ ಮಾತರಂ ಗೀತೆ ಮುಸ್ಲಿಂರ ಪ್ರಚೋದಿಸಬಹುದು ಎಂದು ಜವಾಹರ ಲಾಲ್ ನೆಹರೂ ಹೇಳಿದ್ದರು. ಬಳಿಕ ಕಾಂಗ್ರೆಸ್ ಮುಸ್ಲಿಂ ಲೀಗ್ ಗೆ ಶರಣಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಸ್ಫೋಟಕ ಆರೋಪ ಮಾಡಿದರು.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಅವರು, ರಾಷ್ಟ್ರೀಯ ಗೀತೆ ವಂದೇ ಮಾತರಂನ 150 ನೇ ವಾರ್ಷಿಕೋತ್ಸವದ ಅಂಗವಾಗಿ ಸುದೀರ್ಘವಾಗಿ ವಿವರಣೆ
ನೀಡಿದರು.
ಲೋಕಸಭೆಯಲ್ಲಿ 10 ಗಂಟೆಗಳ ಚರ್ಚೆಗೆ ಮೋದಿ ಅವರು ಚಾಲನೆ ನೀಡಿದರು. ಈ ಚರ್ಚೆಯು ಅದರ ಇತಿಹಾಸದ ಹಲವಾರು ಮಹತ್ವದ ಮತ್ತು ಇತರೆವಿಚಾರಗಳ ಕುರಿತಂತೆ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ. ನಂತರ ರಾಜ್ಯಸಭೆಯಲ್ಲಿ ಗೃಹ ಸಚಿವರ ನೇತೃತ್ವದಲ್ಲಿ ಒಂದು ದಿನದ ವಿಶೇಷ ಚರ್ಚೆ ನಡೆಯುತ್ತಿದ್ದು, ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ವಂದೇ ಮಾತರಂ ಪಾತ್ರವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು.
ಲಕ್ಷಾಂತರ ಜನರು ವಂದೇ ಮಾತರಂ ಜಪಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರಿಂದ ನಾವು ಇಲ್ಲಿ ಕುಳಿತಿದ್ದೇವೆ ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಹೇಳಿದರು.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವಂದೇ ಮಾತರಂ ಮಂತ್ರವು ಇಡೀ ದೇಶಕ್ಕೆ ಶಕ್ತಿ, ಸ್ಫೂರ್ತಿಯನ್ನು ನೀಡಿತು ಎಂದು ಅವರು ಹೇಳಿದರು.





Leave a comment