ದಾವಣಗೆರೆ:ಮುಸ್ಲಿಂ ಒಕ್ಕೂಟದ ಕಚೇರಿಯಲ್ಲಿ ನಡೆದ ಮುಸ್ಲಿಂ ಒಕ್ಕೂಟದ ಮಹತ್ವದ ಸಭೆಯಲ್ಲಿ ವಕೀಲ ನಜೀರ್ ಅಹ್ಮದ್ ಅವರನ್ನು ಒಕ್ಕೂಟದ ನೂತನ ಸಂಚಾಲಕರಾಗಿ ಏಕಮತದಿಂದ ಆಯ್ಕೆ ಮಾಡಲಾಯಿತು.
ಈ ಸುದ್ದಿಯನ್ನೂ ಓದಿ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ “ಇಂಡಿಪೆಂಡೆಂಟ್” ಆಗಿ ಕಣಕ್ಕಿಳಿಯಲ್ಲ, “ಮತ್ತೇ…”?: ಜಿ. ಬಿ. ವಿನಯ್ ಕುಮಾರ್ ಸ್ಪೋಟಕ ಸಂದರ್ಶನ
ಸಭೆಯಲ್ಲಿ ವಿವಿಧ ರಾಜಕೀಯ, ಸಾಮಾಜಿಕ ಹಾಗೂ ಕಾರ್ಮಿಕ ಸಂಘಟನೆಗಳ ಪ್ರಮುಖ ನಾಯಕರು ಭಾಗವಹಿಸಿ, ಮುಸ್ಲಿಂ ಒಕ್ಕೂಟದ ಸಿದ್ಧಾಂತ, ಉದ್ದೇಶ ಹಾಗೂ ಸೇವಾ ಮನೋಭಾವದ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿದರು. ನೂತನವಾಗಿ ಆಯ್ಕೆಯಾದ ಸಂಚಾಲಕ ವಕೀಲ ನಜೀರ್ ಅಹ್ಮದ್ ಅವರಿಗೆ ಒಕ್ಕೂಟದ ಮೂಲ ತತ್ವಗಳು ಹಾಗೂ ಸಮುದಾಯ ಸೇವೆಯ ಜವಾಬ್ದಾರಿಗಳನ್ನು ವಿವರಿಸಿ, ನಿಸ್ವಾರ್ಥ ಸೇವಾ ಮನೋಭಾವದೊಂದಿಗೆ ಸಂಘಟನೆಯನ್ನು ಮುನ್ನಡೆಸುವಂತೆ ಸಭೆಯು ಸಲಹೆ ನೀಡಿತು.
ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಉಲ್ಲಾ, ಎಐಎಂಐಎಂನ ಮಹಮ್ಮದ್ ಅಲಿ ಶೋಯಿಬ್, ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ರಜ್ವಿ ರಿಯಾಜ್, ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿಲ್ ಖಾನ್, ಬಿಜೆಪಿ ಮುಖಂಡ ಸಿ.ಆರ್. ನಸೀರ್ ಅಹ್ಮದ್, ಡಬ್ಲ್ಯೂಪಿಐ ಜಿಲ್ಲಾ ಉಪಾಧ್ಯಕ್ಷ ಶಾಬಾಜ್ ಮಹಮ್ಮದ್ ಜಾಫರ್, ಕರ್ನಾಟಕ ಸೋಷಿಯಲಿಸ್ಟ್ ಸರ್ವೀಸ್ ಸಂಘದ ಹಯಾತ್ ಎನ್, ಎನ್‌ಎಸ್‌ವಿಐ ಮುಖಂಡ ನೂರು ಅಹ್ಮದ್, ಇಂಡಿಯನ್ ಹೆಲ್ತ್ ಪಿಂಗ್ ಹ್ಯಾಂಡ್ ಅಧ್ಯಕ್ಷ ರಹಮತ್ ವುಲ್ಲಾ ಮಸೀದಿಮಾಜಿ ಮುತುವಲ್ಲಿ ಮೊಹಮ್ಮದ್ ಫಾರೂಕ್, ಸ್ಕಾರ್ಪ್ ಮರ್ಚೆಂಟ್ ಯೂನಿಯನ್ ಮುಖಂಡ ಮುನೀರ್, ಜವಾಹರ್ ಲಾಲ್ ಮಂಚ್ ರಾಜ್ಯ ಸಂಚಾಲಕ ಅಮ್ಜದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಭೆಯಲ್ಲಿ ಭಾಗವಹಿಸಿದವರು ಮುಸ್ಲಿಂ ಒಕ್ಕೂಟವು ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಸದಾ ಬದ್ಧವಾಗಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಮುದಾಯದ ಏಕತೆ, ಶಾಂತಿ ಮತ್ತು ಸೇವೆಯನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡು ಕಾರ್ಯನಿರ್ವಹಿಸುವಂತೆ ನೂತನ ಸಂಚಾಲಕರಿಗೆ ಶುಭಾಶಯ ಕೋರಲಾಯಿತು.
ನೂತನ ಸಂಚಾಲಕರಾಗಿ ಆಯ್ಕೆಯಾದ ವಕೀಲ ನಜೀರ್ ಅಹ್ಮದ್ ಮಾತನಾಡಿ, ತಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಕೃತಜ್ಞತೆ ಸಲ್ಲಿಸಿ, ಮುಸ್ಲಿಂ ಒಕ್ಕೂಟದ ಸಿದ್ಧಾಂತಗಳಿಗೆ ಅನುಗುಣವಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದರು.





Leave a comment