Site icon Kannada News-suddikshana

ಅಮೆರಿಕದ ಬೋಸ್ಟನ್ , ಲಾಸ್ ಏಂಜಲೀಸ್ ನಗರಗಳಲ್ಲಿ ಹೊಸ ರಾಯಭಾರಿ ಕಚೇರಿ- ಪ್ರಧಾನಿ ಮೋದಿ

ನ್ಯೂಯಾರ್ಕ್‌: ಅಮೆರಿಕದ ಬೋಸ್ಟನ್ ಹಾಗೂ ಲಾಸ್ ಏಂಜಲೀಸ್ ನಗರಗಳಲ್ಲಿ ಭಾರತ ಹೊಸ ರಾಯಭಾರಿ ಕಚೇರಿಗಳನ್ನು ತೆರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಿಳಿಸಿದ್ದಾರೆ.

ಭಾರತೀಯ ಮೂಲದ ಅಮೆರಿಕನ್ ಸಮುದಾಯದವರ ಬಹುದಿನಗಳ ಬೇಡಿಕೆ ಈ ಮೂಲಕ ಈಡೇರಲಿದೆ. ಬೋ ಸ್ಟನ್, ಅಮೆರಿಕದ ಫಾರ್ಮಾ ಹಾಗೂ ಶೈಕ್ಷಣಿಕ ರಾಜಧಾನಿ ಎನಿಸಿದ್ದರೆ, ಲಾಸ್ ಏಂಜಲೀ ಸ್ ಹಾಲಿವುಡ್‌ ತವರಾಗಿದೆ.ಮುಂದಿನ ಒಲಿಂಪಿಕ್ಸ್‌ ಈ (ಲಾಸ್ ಏಂಜಲೀಸ್) ನಗರ ಆತಿಥ್ಯ ವಹಿಸಲಿದೆ. ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಎರಿಕ್ ಗಾರ್ಸೆಟ್ಟಿ ಅವರು ಲಾಸ್ ಏಂಜಲೀಸ್ನ ಮೇಯರ್ ಆಗಿದ್ದರು.

ನ್ಯೂಯಾರ್ಕ್‌ ನ ನಾಸ್ಸೌನಲ್ಲಿ ಭಾರತೀಯ ಸಮುದಾಯದವರನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಸ್ನೇಹಿತರೇ , ನಮ್ಮ ಸರ್ಕಾರ ಸಿಯಾಟಲ್ನಲ್ಲಿ ರಾಯಭಾರಿ ಕಚೇರಿ ತೆರೆಯಲಿದೆ ಎಂದು ಕಳೆದ ವರ್ಷ ಘೋಷಿಸಿದ್ದೆ. ಇದೀಗ ಹೊಸಯೋಜನೆಗಳ ಕಾಲ. ಇನ್ನೆರಡು ರಾಯಭಾರ ಕಚೇರಿ ತೆರೆಯುವಂತೆ ನೀವು ಕೇಳಿದ್ದಿರಿ. ನಿಮ್ಮ ಸಲಹೆಯ ನಂತರ ಬೋಸ್ಟನ್ ಮತ್ತು ಲಾಸ್ ಏಂಜಲೀ ಸ್ನಲ್ಲಿ ರಾಯಭಾರ ಕಚೇರಿ ತೆರೆಯಲು ಭಾರತ ನಿರ್ಧರಿಸಿದೆ’ ಎಂದು ಹೇಳಿದ್ದಾರೆ.

ಇಂದು ವಿಶ್ವಸಂಸ್ಥೆಯ ಮಹಾ ಅಧಿವೇ ಶನವನ್ನುದ್ದೇ ಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ

Exit mobile version