ಹುಬ್ಬಳ್ಳಿ: ಅವಳಿ ನಗರದಲ್ಲಿ ಹೆಚ್ಚುತ್ತಿರುವ ಕ್ರೈಂ ರೇಟ್ ಕಡಿವಾಣ ಹಾಕುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ರೇಣುಕಾಸುಕುಮಾರ ಅವರನ್ನು ಬದಲಾವಣೆ ಮಾಡಬೇಕು ಅಂತ ಇಲ್ಲಿನ ಸ್ವಪಕ್ಷಿಯರು ಹಾಗೂ ಸಾರ್ವಜನಿಕರು ಆಕ್ರೋಶವನ್ನು ಹೊರಹಾಕಿದ್ದರು. ಈ ನಿಟ್ಟಿನಲ್ಲಿ ಇದು ಗೃಹ ಇಲಾಖೆಗೆ ಮುಜುಗರವಾದ ಹಿನ್ನೆಲೆಯಲ್ಲಿ ಮೇಜರ್ ಸರ್ಜರಿ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿಗಳು ಬಲ್ಲ ಮೂಲದಿಂದ ತಿಳಿದು ಬಂದಿದೆ.
ಮಂಗಳೂರು ಕಮಿಷನರೇಟ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ 2007ನೇ ಬ್ಯಾಚಿನ್ IPS ಎನ್ ಶಶಿಕುಮಾರ್ ಅವರನ್ನು ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ಗೆ ನೇಮಕ ಮಾಡುವ ಸಿದ್ಧತೆ ನಡೆದಿದೆ. ಬಿಜೆಪಿ ಸರ್ಕಾರ ಇದ್ದಾಗ ಹುಬ್ಬಳ್ಳಿ-ಧಾರವಾಡ ಕಮಿಷರೇಟ್‌ನನ್ನು IG ಗ್ರೇಡ್ ಮಾಡಲಾಗಿತ್ತು. ಹೀಗಾಗಿ ಇಲ್ಲಿಗೆ ಬರುವ ಅಧಿಕಾರಿಗಳು ಡೈರೆಕ್ಟ್ IPS ಅಧಿಕಾರಿಗಳನ್ನೇ ನೇಮಕ ಮಾಡಬೇಕಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರದಲ್ಲಿ IG ಗ್ರೇಡ್ ನಲ್ಲಿದ್ದ ಕಮಿಷನರೇಟ್ ನನ್ನು D ಗ್ರೇಡ್ ಮಾಡಿ KSPS ಪ್ರಮೋಟೆಡ್ ಅಧಿಕಾರಿಗಳು ಕೂಡ ಕಮೀಷನರ್ ಹುದ್ದೆ ನಿರ್ವಹಿಸುವ ಅವಕಾಶ ಮಾಡಲಾಗಿತ್ತು. ಹೀಗಾಗಿ ಪ್ರಮೋಟೆಡ್ ಅಧಿಕಾರಿಗಳಿಂದ ಇಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡಲು ವಿಫಲರಾದ ಕಾರಣ ಡೈರೆಕ್ಟ್ IPS ಗಳನ್ನು ನೇಮಕ ಮಾಡಿ ಇಲ್ಲಿನ ಕಾನೂನು ಸುವ್ಯವಸ್ಥೆ ಕಂಟ್ರೋಲ್ ತರಲು ಹೋಮ್ ಮಿನಿಸ್ಟರ್ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.