Site icon Kannada News-suddikshana

ಮಕ್ಕಳಲ್ಲಿ ಕಾಲರಾ ಹೆಚ್ಚಳ, ಒಂದೇ ತಿಂಗಳಲ್ಲಿ 30 ಕೇಸ್ ಪತ್ತೆ!

ಮೈಸೂರು: ಚಾಮರಾಜನಗರದಲ್ಲಿ ಹಲವು ದಿನಗಳಿಂದ ಮಳೆಯಾಗುತ್ತಿದ್ದು, ಹವಾಮಾನ ವೈಪರೀತ್ಯ ಪರಿಣಾಮ ಮಕ್ಕಳಲ್ಲಿ ಕಾಲರಾ ಹೆಚ್ಚಾಗುತ್ತಿದೆ.

ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧಿಕಾರಿಗಳ ಪ್ರಕಾರ, ಆಸ್ಪತ್ರೆಯಲ್ಲಿ ಮೇ ತಿಂಗಳಲ್ಲಿ ಸುಮಾರು 30 ಮತ್ತು ಜೂನ್‌ನಲ್ಲಿ 12 ಪ್ರಕರಣಗಳು ವರದಿಯಾಗಿವೆ. ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಮಕ್ಕಳು ದಾಖಲಾಗುತ್ತಿರುವುದು ಕಂಡು ಬಂದಿದೆ.

ಕೊಳಚೆ ನೀರು ನಿಲ್ಲುವುದು, ಕತ್ತರಿಸಿದ ಹಣ್ಣುಗಳ ಮಾರಾಟ, ಬೀದಿ ಬದಿಯಿಂದ ಜಂಕ್ ಫುಡ್ ಸೇವನೆ ಇವು ಕಾಲರಾ ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಕಲುಷಿತ ಆಹಾರ ಮತ್ತು ನೀರಿನಿಂದ ಮಕ್ಕಳು ಜಠರದುರಿತ ಮತ್ತು ಅಜೀರ್ಣವನ್ನು ಸಹ ಅನುಭವಿಸುತ್ತಾರೆ. ಮಾವು ಮತ್ತು ಹಲಸಿನ ಹಣ್ಣಿನ ಋತುವಿನ ನಂತರ ನೊಣಗಳ ಕಾಟ ಕೂಡ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಕಾಲರಾದಿಂದ ದೂರ ಉಳಿಯಲು ನೈರ್ಮಲ್ಯದ ವಾತಾವರಣವನ್ನು ಕಾಪಾಡಿಕೊಳ್ಳುವುದು, ತಾಜಾ ಮತ್ತು ಬಿಸಿ ಆಹಾರ ಸೇವನೆ, ಕಾಯಿಸಿ, ಆರಿಸಿದ ನೀರು. ಐಆರ್’ಎಸ್ ಮತ್ತು ಇತರ ದ್ರವಗಳನ್ನು ಬಳಸುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

 

 

 

 

Exit mobile version