Site icon Kannada News-suddikshana

ಅಂಬೇಡ್ಕರ್ ಅವಹೇಳನ ಮಾಡಿದ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಮುಸ್ಲಿಂ ಒಕ್ಕೂಟ ಪ್ರೊಟೆಸ್ಟ್

SUDDIKSHANA KANNADA NEWS/ DAVANAGERE/ DATE:28-12-2024

ದಾವಣಗೆರೆ: ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಅಪಮಾನಕರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಮುಸ್ಲಿಂ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಜಯದೇವ ಸರ್ಕಲ್, ಗಾಂಧಿ ವೃತ್ತ ಮಾರ್ಗವಾಗಿ ಎಸಿ ಕಚೇರಿಗೆ ತಲುಪಿ ಉಪ ವಿಭಾಗಾಧಿಕಾರಿಗಳ ಮುಖಾಂತರ ರಾಷ್ಟಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಅಂಬೇಡ್ಕರ್ ಅವರಿಗೆ ಅಪಮಾನಕರ ಮಾತುಗಳನ್ನಾಡಿದ ಕೆಂದ್ರ ಸಚಿವ ಅಮಿತ್ ಷಾ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸಂಸದ್ ಭವನದಲ್ಲಿ ರಾಜ್ಯಸಭಾ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಅಮಿತ್ ಶಾ ಅವರು ಮಾತನಾಡುತ್ತ “ಅಭಿ ಏಕ್ ಫ್ಯಾಶನ್ ಹೋ ಗಯಾ ಹೈ – ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ .. ಇತ್ನಾ ನಾಮ್ ಅಗರ್ ಭಗವಾನ್ ಕಾ ಲೇತೆ ತೋ ಸಾತ್ ಜನ್ಮೋನ್ ತಕ್ ಸ್ವರ್ಗ್ ಮಿಲ್ ಜಾತಾ.. ಎಂದು ಹೇಳಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನಕರ ಮಾತುಗಳನ್ನಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಮಿತ್ ಶಾ ಹೇಳಿಕೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ.ಅಮಿತ್ ಶಾ ಈ ಹೇಳಿಕೆಯಿಂದ ಸಂವಿಧಾನಕ್ಕೆ ಒಪ್ಪುವ ದೇಶದ ಬಹುಸಂಖ್ಯಾತ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಅಮಿತ್ ಶಾ ಹೇಳಿಕೆಯಿಂದ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿವೆ. ಶಾ ಹೇಳಿಕೆ ದೇಶದ ಸ್ವಾಸ್ಥ್ಯ ಹಾಳು ಮಾಡುತ್ತಿದೆ. ಆದ್ದರಿಂದ ಕೂಡಲೇ ಕೆಂದ್ರ ಸಚಿವ ಸ್ಥಾನ, ಸಂಸದ ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನ ದೇಶ ದ್ರೋಹವೆಂದು ಪರಿಗಣಿಸಿ ಅಮಿತ್ ಶಾ ನಾಗರಿಕತೆ ರದ್ದುಪಡಿಸಿ ದೇಶದಿಂದ ಹೋರಗೆ ಹಾಕಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಾವಣಗೆರೆ ಮುಸ್ಲಿಂ ಒಕ್ಕೂಟ ದ ಸಂಚಾಲಕ ಟಿ.ಅಸ್ಗರ್, ವಕೀಲ ನಜೀರ್, ಇಬ್ರಾಹಿಂ ಖಲೀಲವುಲ್ಲಾ, ಮಹಮ್ಮದ್ ಶೋಯೇಬ್ ಅಲಿ, ಯಹಿಯ, ಅಲ್ತಾಫ್ ಹುಸೇನ್, ಮುಜಾಮಿಲ್, ಜಾಫರ್, ಅದಿಲ್ ಖಾನ್, ರಿಯಾಜ್ ರಜ್ವಿ, ತಾಹೀರ್, ನೂರ ಅಹ್ಮದ್, ಜಬೀವುಲ್ಲಾ ಬ್ಯಾಟರಿ, ಅಜ್ಮತ್, ರಫೀಕ್, ಹಯಾತ್, ಸುಹೀಲ್, ಖಾಜಾ. ಮತ್ತಿತರರು ಪಾಲ್ಗೊಂಡಿದ್ದರು.

Exit mobile version