Site icon Kannada News-suddikshana

BIG BREAKING: ರೌಡಿಶೀಟರ್ ಸಂತೋಷ್ ಅಲಿಯಾಸ್ ಕಣುಮಾ ಭೀಕರ ಹತ್ಯೆ: ಕೊಂದವರು ಯಾರು?

SUDDIKSHANA KANNADA NEWS/ DAVANAGERE/ DATE-05-05-2025

ದಾವಣಗೆರೆ: ರೌಡಿಶೀಟರ್ ಸಂತೋಷ್ ಅಲಿಯಾಸ್ ಕಣುಮಾ ಭೀಕರ ಹತ್ಯೆ ಮಾಡಲಾಗಿದೆ. ಇಂದು ಮಧ್ಯಾಹ್ನ ದಾವಣಗೆರೆಯ ಹದಡಿ ರಸ್ತೆಯ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎದುರಿನ ಕಲ್ಲೇಶ್ವರ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಪಕ್ಕದ ಜಿಮ್ ಮತ್ತು ಕ್ಲಬ್ ಬಳಿ ಕೊಲೆ ಮಾಡಲಾಗಿದೆ.

ಊಟ ಮುಗಿಸಿಕೊಂಡು ಇಲ್ಲಿಗೆ ಬಂದಿದ್ದಾಗ ಹೊಂಚು ಹಾಕಿ ಕುಳಿತಿದ್ದ ಆಗಂತುಕರು ಬಂದು ಕೊಂದು ಹಾಕಿದ್ದಾರೆ. ರೌಡಿಶೀಟರ್, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ರಿಮಿನಲ್ ಅಪರಾಧಗಳು ಕಣುಮಾ ಅಲಿಯಾಸ್ ಸಂತೋಷ್ ಮೇಲಿತ್ತು.

ರೌಡಿ ಶೀಟರ್ ಬುಳ್ ನಾಗನ ಹತ್ಯೆಯಲ್ಲಿ ಸಂತೋಷ್ ಅಲಿಯಾಸ್ ಕಣುಮಾನ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಬುಳ್ ನಾಗನ ಕಡೆಯವರು ಸಂತೋಷ್ ಅಲಿಯಾಸ್ ಕಣುಮಾನ ಮೇಲೆ ಸೇಡು ತೀರಿಸಿಕೊಳ್ಳಲು ಕಾದು ಕುಳಿತಿತ್ತು. ರೌಡಿ ಕಾಗೆ ರಾಜಾ ಮತ್ತು ಚಟ್ನಿ ಅಜ್ಜಯ ಜೋಡಿ ಕೊಲೆಗೆ ಪ್ರತಿಯಾಗಿ ಬುಳ್ ನಾಗನನ್ನು ಹತ್ಯೆ ಮಾಡಿದ್ದ ಆರೋಪದಲ್ಲಿ ಸಂತೋಷ ಅಲಿಯಾಸ್ ಕಣುಮಾ ಅರೆಸ್ಟ್ ಆಗಿದ್ದ. ರಿಯಲ್ ಎಸ್ಟೇಟ್, ನಿಧಿಯಲ್ಲಿ ಸಿಕ್ಕ ಬಂಗಾರ ನೀಡುವುದಾಗಿ ವಂಚನೆ ಮಾಡಿದ ಆರೋಪವೂ ಕಣುಮಾ ಮೇಲಿತ್ತು.

Exit mobile version