ದಾವಣಗೆರೆ: ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಯ ಬೈರನಹಳ್ಳಿಯ ವ್ಯಕ್ತಿಯನ್ನು ಕೊಲೆ ಮಾಡಿ ಸುಟ್ಟು ಹಾಕಿರುವ ಘಟನೆ ನಡೆದಿದೆ.
READ ALSO THIS STORY: ಡಾ.ಅಬ್ದುಲ್ ಕಲಾಂ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಸಾಸ್ವೆಹಳ್ಳಿ ಗ್ರಾಮದ ತುಂಗಾಭದ್ರಾ ನದಿ ದಡದಲ್ಲಿ ವ್ಯಕ್ತಿಯೊಬ್ಬರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬೈರನಹಳ್ಳಿಯ ಚೇತನ್ ಸ್ವಾಮಿ (31) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಅಡಿಕೆ ತೋಟಕ್ಕೆ ವಿನಯ್ ಕುಮಾರ್ ಎಂಬುವವರು ತೆರಳಿದಾಗ ಕೆಟ್ಟ ವಾಸನೆ ಮೂಗಿಗೆ ಬಡಿದಿದೆ. ಹಳ್ಳದ ದಡದ ಬಳಿ ಪರಿಶೀಲನೆ ನಡೆಸಿದಾಗ ಮೃತದೇಹವೊಂದು ಭಾಗಶಃ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬೇರೆಡೆ ಕೊಲೆ ಮಾಡಿ ಹಂತಕರು ಬಳಿಕ ಇಲ್ಲಿಗೆ ಶವ ತಂದು ಸುಟ್ಟು ಹಾಕಿ ಹೋಗಿರಬಹುದು ಎಂದು ಮೃತರ ತಂದೆ ಹಾಲೇಶಯ್ಯ ಮಠದ್ ಅವರು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಶಂಕಿಸಿದ್ದಾರೆ. ಇನ್ ಸ್ಪೆಕ್ಟರ್ ಹೆಚ್. ಸುನೀಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.





Leave a comment