SUDDIKSHANA KANNADA NEWS/ DAVANAGERE/ DATE:08-08-2023
ದಾವಣಗೆರೆ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಜೈಲಿ(Prison)ನಿಂದ ಹೊರ ಬಂದ ಕೆಲ ದಿನಗಳಲ್ಲಿಯೇ ಯುವಕನೊಬ್ಬನನ್ನು ಬಡಿಗೆಯಿಂದ ಥಳಿಸಿ ಕೊಲೆ ಮಾಡಿರುವ ಘಟನೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಕ್ರಾಸ್ ಬಳಿ ನಡೆದಿದೆ.
ಇಂಡಸ್ಟ್ರಿಯಲ್ ಏರಿಯಾ ಸಮೀಪದ ರಾಮನಗರ ವಾಸಿ ನರಸಿಂಹ (26) ಹತ್ಯೆಗೀಡಾದ ಯುವಕ. ಇದೇ ಬಡಾವಣೆಯ ಶಿವಯೋಗೇಶ್ ಬಂಧಿತ ಆರೋಪಿ.
ಘಟನೆ ಹಿನ್ನೆಲೆ ಏನು…?
ನರಸಿಂಹ ಹಾಗೂ ಮೇಸ್ತ್ರಿ ಆಗಿ ಕೆಲಸ ಮಾಡುತ್ತಿದ್ದ ಶಿವಯೋಗೇಶ್ ನಡುವೆ ಹಣದ ವಿಚಾರ ಸಂಬಂಧ ಜಗಳವಾಗಿತ್ತು. ನರಸಿಂಹ ಹಣ ವಾಪಸ್ ನೀಡಲು ಆಗಿರಲಿಲ್ಲ. ಇದು ಶಿವಯೋಗೇಶ್ ನ ಸಿಟ್ಟಿಗೆ ಕಾರಣವಾಗಿತ್ತು. ಪದೇ ಪದೇ ಹಣ ಕೇಳುತ್ತಿದ್ದ ಕಾರಣಕ್ಕೆ ನರಸಿಂಹನು ಶಿವಯೋಗೇಶ್ ಗೆ ಥಳಿಸಿದ್ದ. ಮಚ್ಚಿನಿಂದ ಹಲ್ಲೆ ನಡೆಸಿದ್ದ. ಈ ಪ್ರಕರಣ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕೆಲ ದಿನಗಳ ಕಾಲ ಜೈಲು ಶಿಕ್ಷೆಯನ್ನೂ ನರಸಿಂಹ ಅನುಭವಿಸಿದ್ದ.
ಈ ಸುದ್ದಿಯನ್ನೂ ಓದಿ:
Bhadra Dam: 166 ಅಡಿ ದಾಟಿದ ಭದ್ರಾ ಡ್ಯಾಂ, ಆಗಸ್ಟ್ 10ರಿಂದ ನಾಲೆಗಳಲ್ಲಿ ಹರಿಯಲಿದೆ ನೀರು: 6027 ಕ್ಯೂಸೆಕ್ ಒಳಹರಿವು
ಜೈಲಿ(Prison)ನಿಂದ ಹೊರಗಡೆ ಬಂದ ಬಳಿಕ ಶಿವಯೋಗೇಶ್ ಗೆ ನರಸಿಂಹ ಕಿರುಕುಳು ನೀಡುತ್ತಿದ್ದ, ಬೆದರಿಕೆಯಂಥ ಮಾತುಗಳನ್ನಾಡುತ್ತಿದ್ದ. ಇದರಿಂದ ರೋಸಿ ಹೋಗಿದ್ದ ಶಿವಯೋಗೇಶ್ ನಿನ್ನ ಬಳಿ ಸ್ವಲ್ಪ ಮಾತನಾಡುವುದಿದೆ ಬಾ
ಎಂದು ನರಸಿಂಹನನ್ನು ಬರುವಂತೆ ಹೇಳಿದ್ದ. ಈ ವೇಳೆ ಬಂದ ನರಸಿಂಹನಿಗೆ ಬಡಿಗೆಯಿಂದ ತಲೆಗೆ ಹೊಡೆದಿದ್ದಾನೆ. ಈ ವೇಳೆ ರಕ್ತಸ್ರಾವವಾಗಿ ನರಸಿಂಹ ಕೊನೆಯುಸಿರೆಳೆದಿದ್ದಾನೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿ ಶಿವಯೋಗೇಶ್ ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.