Site icon Kannada News-suddikshana

ಸೆಲ್ಫಿ ಪ್ರಿಯರೆ ಎಚ್ಚರ..! ಫೋಟೋ ತೆಗೆಯಲು ಹೋಗಿ 100 ಅಡಿ ಆಳದ ಕಮರಿಗೆ ಬಿದ್ದ ಮಹಿಳೆಯ ರಕ್ಷಣೆ

ಮುಂಬೈ: ಸೆಲ್ಫಿ ತೆಗೆಯಲು ಹೋಗಿ ಆಳದ ಕಂದಕ್ಕಡ ಬಿದ್ದ ಮಹಿಳೆಯನ್ನು ರಕ್ಷಿಸಿರುವ ಘಟನೆ ಮಹಾರಾಷ್ಟ್ರದ ಸತಾರಾದಲ್ಲಿ ನಡೆದಿದೆ.

ಪುಣೆಯಿಂದ ಸ್ನೇಹಿತರ ಜೊತೆ ಸತಾರಾ ಜಿಲ್ಲೆಯ ಬೋರ್ನ್ ಘಾಟ್‌ಗೆ ಬಂದಿದ್ದ ಮಹಿಳೆ ಥೋಸ್ಘರ್ ಜಲಪಾತದ ಬಳಿ 100 ಅಡಿ ಆಳದ ಕಮರಿಗೆ ಬಿದ್ದಿದ್ದಾಳೆ.

ಗೃಹರಕ್ಷಕ ದಳ ಮತ್ತು ಸಹ ಪರ್ವತಾರೋಹಿಗಳು ಮಹಿಳೆಯನ್ನು ಸುರಕ್ಷಿತವಾಗಿ ಕಮರಿನಿಂದ ಹೊರಕ್ಕೆ ಕರೆತಂದರು. ಆಕೆಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version