Site icon Kannada News-suddikshana

ಬದ್ಧ ವೈರಿಗಳ ಕಾಳಗಕ್ಕೆ ಮುಹೂರ್ತ ಫಿಕ್ಸ್!?

ಚಾಂಪಿಯನ್ಸ್ ಟ್ರೋಫಿ 2025 ಫೆ.19ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಮಾರ್ಚ್ 09ರಂದು ನಡೆಯಲಿದೆ ಇಂದು ಈಗಾಗಲೇ ವರದಿಯಾಗಿದೆ. ಇನ್ನೂ ಭಾರತ ತಂಡದ ಕರಡು ವೇಳಪಟ್ಟಿ ಹೊರಬಿದ್ದಿದ್ದು, ಈ ವೇಳಾಪಟ್ಟಿಯಂತೆ ಭಾರತ ತನ್ನ ಟೂರ್ನಿಯನ್ನು ಫೆ.20ರಿಂದ ಪ್ರಾರಂಭಿಸಲಿದೆ.

ಟೀಂ ಇಂಡಿಯಾ ಗ್ರೂಪ್ Aನಲ್ಲಿ‌ ಕಾಣಿಸಿಕೊಂಡಿದ್ದು ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡುವ ಮುಖೇನಾ ಟೂರ್ನಿಯನ್ನು ಆರಂಭಿಸಲಿದೆ. ಇನ್ನೂ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ಫೆ.23ಕ್ಕೆ ಎದುರಾಗಲಿವೆ.
ಟೀಂ ಇಂಡಿಯಾದ ವೇಳಾಪಟ್ಟಿ
ಫೆ.20 ಭಾರತ ಹಾಗೂ ಬಾಂಗ್ಲಾದೇಶ
ಫೆ.23 ಭಾರತ ಹಾಗೂ ಪಾಕಿಸ್ತಾನ
ಮಾ.02 ಭಾರತ ಹಾಗೂ ನ್ಯೂಜಿಲೆಂಡ್
ಇನ್ನೂ ಟೀಂ ಇಂಡಿಯಾದ ಎಲ್ಲಾ ಪಂದ್ಯಗಳು ಯು.ಎ.ಇ ಅಥವಾ ಶ್ರೀಲಂಕಾದ ಕೊಲೊಂಬೊದಲ್ಲಿ ನಡೆಯುವ ಸಾಧ್ಯತೆ ಇದೆ, ಇನ್ನೂಳಿದ ಎಲ್ಲಾ ಪಂದ್ಯಗಳು ಪಾಕಿಸ್ತಾನದಲ್ಲಿಯೇ ನಡೆಯಲಿದ್ದು, ಇಂಡಿಯಾ ಸೆಮಿಫೈನಲ್ಸ್ ಅಥವಾ ಫೈನಲ್ಸ್ ಪ್ರವೇಶಿಸಿದರೆ. ಆ ಪಂದ್ಯಗಳನ್ನು ದುಬೈ ಅಥವಾ ಶ್ರಿಲಂಕಾದಲ್ಲಿ ನಡೆಸಲು ಆಯೋಜಿಸಲಾಗಿದೆ.

Exit mobile version