ದಾವಣಗೆರೆ: ಸಂಸತ್ತಿನಲ್ಲಿ ವಿರೋಧ ಪಕ್ಷದ ಸಂಸದರುಗಳು ಅಭಿಪ್ರಾಯ ಹಂಚಿಕೊಳ್ಳಲು ಆಡಳಿತ ಪಕ್ಷ ಅವಕಾಶ ಕಲ್ಪಿಸುತ್ತಿಲ್ಲ ಎಂದು ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಂಸದರು ಆಡಳಿತಾರೂಢ ಪಕ್ಷದ ಸಂಸದರಿಗೆ ಹಳೆಯ ಯುಪಿಎ ಸರ್ಕಾರದ ವೈಫಲ್ಯಗಳನ್ನು ಉಲ್ಲೇಖಿಸಲು ಮುಕ್ತ ಅವಕಾಶ ನೀಡಲಾಗುತ್ತಿದೆ. ಆದರೆ ಇಂದಿನ ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸಲು ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರಿಗೆ ಮಾತನಾಡುವ ಅವಕಾಶ ನಿರಾಕರಿಸಲಾಗುತ್ತಿದೆ ಇದು ಪ್ರಜಾಸತ್ತಾತ್ಮಕತೆಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ.
ಮಾಜಿ ಸೇನಾ ಮುಖ್ಯಸ್ಥರಾದ ಜನರಲ್ ಮನೋಜ್ ಮುಕುಂದ್ ನರವಾನೆ ಅವರ (ಇನ್ನೂ ಪ್ರಕಟವಾಗದ) ಲೇಖನದ ಆಧಾರದಲ್ಲಿ ರಾಷ್ಟ್ರ ಭದ್ರತೆ ಮತ್ತು ಸೇನಾ ಸಿದ್ಧತೆ ಕುರಿತ ಗಂಭೀರ ವಿಚಾರಗಳನ್ನು ಸಂಸತ್ತಿನಲ್ಲಿ ಚರ್ಚಿಸಲು ರಾಹುಲ್ ಗಾಂಧಿಯವರು ಯತ್ನಿಸಿದರೂ ಅವರಿಗೆ ಅವಕಾಶ ನೀಡದಿರುವುದು ಸಂಸತ್ತಿನ ಗೌರವ ಮತ್ತು ಸಂವಿಧಾನಾತ್ಮಕತೆಗೆ ಧಕ್ಕೆಯಾಗಿದೆ
ಎಂದು ಆರೋಪಿಸಿದ್ದಾರೆ.
ಸಂಸತ್ತು ಆಡಳಿತಾರೂಢ ಪಕ್ಷದ ಸ್ವತ್ತಲ್ಲ. ಅದು ಚರ್ಚೆ, ಭಿನ್ನಾಭಿಪ್ರಾಯ ಮತ್ತು ಹೊಣೆಗಾರಿಕೆಗೆ ಮೀಸಲಾದ ಜನರ ವೇದಿಕೆ. ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕುವುದರಿಂದ ಪ್ರಜಾಸತ್ತಾತ್ಮಕ ಸಂಸ್ಥೆಗಳು ದುರ್ಬಲಗೊಳ್ಳುತ್ತವೆ ಮತ್ತು ಜನರ ನಂಬಿಕೆ ಕುಸಿಯುತ್ತದೆ. ಎಲ್ಲರಿಗೂ ಮಾತನಾಡುವ ಅವಕಾಶ ಇರುವುದೇ ಪ್ರಜಾಸತ್ತಾತ್ಮಕತೆಯ ಬಲ ಆದ್ದರಿಂದ ಅದನ್ನು ರಾಕರಿಸುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ವ್ಯಕ್ತಪಡಿಸಿದ್ದಾರೆ.
- Constitution
- DAVANAGERE MP
- Democracy
- Dr. Prabha Mallikarjun
- General Manoj Mukund Naravane
- MP Prabha Mallikarjun Statement
- National Security
- Opposition Voice
- Parliament Debate
- Political News Karnataka
- Rahul Gandhi
- UPA vs NDA
- ಆಡಳಿತ ಪಕ್ಷದ ವೈಫಲ್ಯ
- ಜನರಲ್ ಮನೋಜ್ ಮುಕುಂದ್ ನರವಾನೆ
- ಡಾ. ಪ್ರಭಾ ಮಲ್ಲಿಕಾರ್ಜುನ್
- ದಾವಣಗೆರೆ ರಾಜಕೀಯ
- ದಾವಣಗೆರೆ ಸಂಸದೆ
- ಪ್ರಜಾಪ್ರಭುತ್ವ
- ರಾಷ್ಟ್ರ ಭದ್ರತೆ
- ರಾಹುಲ್ ಗಾಂಧಿ
- ವಿರೋಧ ಪಕ್ಷದ ಧ್ವನಿ
- ಸಂವಿಧಾನ
- ಸಂಸತ್ತು





Leave a comment