Site icon Kannada News-suddikshana

ಕೇಶ ವಿನ್ಯಾಸಗಾರರಿಗೆ ಕಿಟ್ ವಿತರಿಸಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

ಪ್ರಭಾ ಮಲ್ಲಿಕಾರ್ಜುನ್

SUDDIKSHANA KANNADA NEWS/DAVANAGERE/DATE:08_10_2025

ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್ ಅವರ 58ನೇ ಜನ್ಮದಿನದ ಹಿನ್ನೆಲೆಯಲ್ಲಿ ಜಿಲ್ಲೆಯ ಕೇಶ ವಿನ್ಯಾಸಗಾರರಿಗೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಮ್ಮ ಗೃಹಕಚೇರಿಯ ಆವರಣದಲ್ಲಿ ಮಂಗಳವಾರ ಸುಮಾರು 500 ಕಿಟ್‌ಗಳನ್ನು ವಿತರಿಸಿದರು.

READ ALSO THIS STORY: 19 ವರ್ಷದ ಸಹೋದರಿ ಅನೈತಿಕ ಸಂಬಂಧಕ್ಕೆ ಬೇಸತ್ತು ನೀರಿನಲ್ಲಿ ಮುಳುಗಿಸಿ ಕೊಲೆ: ಪೊಲೀಸರಿಗೆ ಕರೆ ಮಾಡಿದ ಸಹೋದರ!

ಈ ಕಾರ್ಯಕ್ರಮವನ್ನು ಎಸ್‌.ಎಸ್‌.ಎಂ. ಫೌಂಡೇಶನ್‌ನಿಂದ ಆಯೋಜಿಸಲಾಗಿತ್ತು.

ಈ ಮೂಲಕ ಸ್ಥಳೀಯ ಕೇಶ ವಿನ್ಯಾಸಗಾರರ ವೃತ್ತಿಜೀವನಕ್ಕೆ ಅಗತ್ಯವಾದ ಆಧಾರವನ್ನು ಒದಗಿಸುವುದರ ಜೊತೆಗೆ, ಅವರ ಸ್ವಾವಲಂಬನೆಗೆ ಬಲ ನೀಡುವ ಮಹತ್ವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕಿಟ್ ನ ಸಮರ್ಪಕವಾಗಿ ಬಳಕೆ ಮಾಡಿಕೊಂಡು ವೃತ್ತಿಜೀವನ ನಡೆಸಬೇಕೆಂದು ಸಲಹೆ ನೀಡಿದರು.

Exit mobile version