Site icon Kannada News-suddikshana

ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾಗಿ ಮೊಹಮ್ಮದ್ ಜಿಕ್ರಿಯಾ ನೇಮಕ

SUDDIKSHANA KANNADA NEWS/ DAVANAGERE/ DATE:21-10-2024

ದಾವಣಗೆರೆ: ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾಗಿ ಮೊಹಮ್ಮದ್ ಜಿಕ್ರಿಯಾ ಅವರನ್ನು ನೇಮಕ ಮಾಡಲಾಗಿದೆ.

ಟಾರ್ಗೆಟ್ ಅಸ್ಲಾಂ ಅವರು ಈ ವೇದಿಕೆಯ ರಾಜ್ಯಾಧ್ಯಕ್ಷರಾಗಿದ್ದು, ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ ಉಳಿಸುವ ನಿಟ್ಟಿನಲ್ಲಿ ಈ ವೇದಿಕೆಯು ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನಲ್ಲಿ ನಡೆದ ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆಯ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸಭೆಯಲ್ಲಿ ಮೊಹಮ್ಮದ್ ಜಿಕ್ರಿಯಾ ಅವರನ್ನು ನೇಮಿಸಲು ಒಮ್ಮತದಿಂದ ತೀರ್ಮಾನಿಸಲಾಯಿತು.

ಜಿಲ್ಲಾ ಪದಾಧಿಕಾರಿಗಳ ನೇಮಕ ಪರಿಷ್ಕರಣೆ ಆಗಬೇಕಿದ್ದು, ಸದ್ಯದಲ್ಲಿಯೇ ಪದಗ್ರಹಣ ಸಮಾರಂಭ ನಡೆಯಲಿದೆ. ಮೊಹಮ್ಮದ್ ಜಿಕ್ರಿಯಾ ಅವರು ಜವಾಹರ್ ಲಾಲ್ ಬಾಲ್ ಮಂಚ್ ನ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದಾ ಕ್ರಿಯಾಶೀಲರಾಗಿರುವ, ಸಂಘಟನೆಯಲ್ಲಿ ನಿಪುಣರಾಗಿರುವ ಮೊಹಮ್ಮದ್ ಜಿಕ್ರಿಯಾ ಅವರನ್ನು ನೇಮಿಸಲಾಗಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಟಾರ್ಗೆಟ್ ಅಸ್ಲಾಂ ಅವರು ತಿಳಿಸಿದ್ದಾರೆ.

Exit mobile version