Site icon Kannada News-suddikshana

ಗುರುದ್ವಾರದಲ್ಲಿ ಸಿಖ್ ಪೇಟ ತೊಟ್ಟು ಭಕ್ತರಿಗೆ ಪ್ರಸಾದ ಬಡಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೆಂದ್ರ ಮೋದಿ (Narendra Modi) ಪಾಟ್ನಾದಲ್ಲಿ ಚುನಾವಣಾ ಪ್ರಚಾರದ ಎರಡನೇ ದಿನವಾದ ಇಂದು (ಮೇ 13) ಗುರುದ್ವಾರ ಪಾಟ್ನಾ ಸಾಹಿಬ್‍ಗೆ ಭೇಟಿ ನೀಡಿ ಗುರುದ್ವಾರದಲ್ಲಿ ಭಕ್ತರಿಗೆ ಪ್ರಸಾದ ಬಡಿಸಿದ್ದಾರೆ. ಸಾಂಪ್ರದಾಯಿಕ ಕುರ್ತಾ, ಕೇಸರಿ ಸಿಖ್ ಪೇಟ ಧರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಗುರುದ್ವಾರಕ್ಕೆ ಬಂದಿದ್ದ ಭಕ್ತರಿಗೆ ವಿಶೇಷ ಪ್ರಸಾದ ಬಡಿಸಿದ್ದಾರೆ. ನಂತರ ಗುರುದ್ವಾರದಲ್ಲಿ `ಕರಃ ಪ್ರಸಾದ’ವನ್ನು ತೆಗೆದುಕೊಂಡರು. ಈ ವೇಳೆ ಡಿಜಿಟಲ್ ಪಾವತಿ ವಿಧಾನ ಬಳಸಿ ಹಣ ಸಂದಾಯ ಮಾಡಿದರು.

ಇಂದು (ಮೆ.13) ಹಾಜಿಪುರ, ಮುಜಾಫರ್‍ಪುರ ಮತ್ತು ಸರನ್‍ನಲ್ಲಿ ಎನ್‍ಡಿಎ ಅಭ್ಯರ್ಥಿಗಳ ಪರ ಚುನಾವಣಾ ರ‍್ಯಾಲಿ ನಡೆಸಿ ಮೋದಿ ಮಾತನಾಡಲಿದ್ದಾರೆ. ಗುರು ಗೋಬಿಂದ್ ಸಿಂಗ್ ಅವರ ಜನ್ಮಸ್ಥಳವನ್ನು ಗುರುತಿಸಲು 18 ನೇ ಶತಮಾನದಲ್ಲಿ ಮಹಾರಾಜ ರಂಜಿತ್ ಸಿಂಗ್ ಈ ತಖತ್ ನಿರ್ಮಿಸಿದ. ಹತ್ತನೇ ಸಿಖ್ ಗುರುವಾದ ಗುರು ಗೋಬಿಂದ್ ಸಿಂಗ್ ಅವರು 1666 ರಲ್ಲಿ ಪಾಟ್ನಾದಲ್ಲಿ ಜನಿಸಿದರು. ಅವರು ಆನಂದಪುರ ಸಾಹಿಬ್‍ಗೆ ತೆರಳುವ ಮೊದಲು ಕೆಲವು ವರ್ಷಗಳ ಕಾಲ ಇಲ್ಲಿಯೇ ಕಳೆದಿದ್ದರು ಎನ್ನುವ ಉಲ್ಲೇಖಗಳಿವೆ.

Exit mobile version