Site icon Kannada News-suddikshana

ಕಳುವಾದ, ಕಳೆದುಕೊಂಡಿದ್ದ 1.5 ಕೋಟಿ ರೂ. ಮೌಲ್ಯದ ಮೊಬೈಲ್ ಗಳು ಪತ್ತೆ: ವಾರಸುದಾರರಿಗೆ ಹಸ್ತಾಂತರ!

ಮೊಬೈಲ್

SUDDIKSHANA KANNADA NEWS/DAVANAGERE/DATE:04_10_2025

ದಾವಣಗೆರೆ: ಕಳುವಾದ ಮತ್ತು ಕಳೆದುಕೊಂಡಿದ್ದ ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ಗಳನ್ನು ಪತ್ತೆ ಮಾಡಿ ಸಂಬಂಧಿಸಿದವರಿಗೆ ದಾವಣಗೆರೆ ಪೊಲೀಸರು ಹಸ್ತಾಂತರಿಸಿದ್ದಾರೆ.

READ ALSO THIS STORY: ಸಕಾರಣ ಕೊಟ್ಟ ಕಾರ್ಯದರ್ಶಿ ಬಿಟ್ಟು ಸಮೀಕ್ಷೆ ಕೈಗೊಳ್ಳದ 3 ಸಿಬ್ಬಂದಿ ಸಸ್ಪೆಂಡ್: ಒಬ್ಬರಿಂದ ಒಂದೇ ದಿನದಲ್ಲಿ ಚನ್ನಗಿರಿಯಲ್ಲಿ 76 ಮನೆ ಸಮೀಕ್ಷೆ!

ದಾವಣಗೆರೆ ಜಿಲ್ಲೆಯಲ್ಲಿ 2025ರ ಜನವರಿ 1ರಿಂದ ಇಲ್ಲಿಯವರೆಗೆ ಕಳುವಾದ, ಕಳೆದು ಹೋದ ಮೊಬೈಲ್ ಫೋನ್ ಗಳ ಪತ್ತೆಗೆ 2370 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ CEIR PORTAL ನಲ್ಲಿ ಮೊಬೈಲ್ ವಾರಸುದಾರರ ವಿವರಗಳನ್ನು ನಮೂದು ಮಾಡಿ ಮೊಬೈಲ್ IMEI ನಂಬರನ್ನು ಬ್ಲಾಕ್ ಮಾಡುವ ಮುಖಾಂತರ ಕಳೆದುಹೋದ ಮೊಬೈಲ್ ಗಳನ್ನು ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪತ್ತೆ ಮಾಡಲಾಗಿದೆ.

ಸುಮಾರು ಹತ್ತು ತಿಂಗಳಲ್ಲಿ ಪತ್ತೆಯಾದ ಮೊಬೈಲ್ ಗಳ ಅಂದಾಜು ಮೊತ್ತ 1.5 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಒಟ್ಟು 861 ಮೊಬೈಲ್ ಗಳನ್ನು ಪೊಲೀಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮೊಬೈಲ್ ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಸಾರ್ವಜನಿಕರ ಗಮನಕ್ಕೆ:

ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕಳುವಾದ, ಕಳೆದು ಹೋದ ಮೊಬೈಲ್ ಪೋನ್ ಗಳನ್ನು ವಾರಸುದಾರರು ಮೊಬೈಲ್ KSP ಮೊಬೈಲ್ App ಮೂಲಕ e-lost ನಲ್ಲಿ ದೂರು ದಾಖಲಿಸಿ, ದೂರಿನ ಸ್ವೀಕೃತಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು, ನಂತರ ‘CEIR’ web portal (https://www.ceir.gov.in)ಗೆ ಭೇಟಿ ನೀಡಿ KSP ಮೊಬೈಲ್ App ಮೂಲಕ ಡೌನ್ಲೋಡ್ ಮಾಡಿಕೊಂಡ ದೂರಿನ ಸ್ವೀಕೃತಿ ಪ್ರತಿ ಹಾಗೂ ಆಧಾರ್ / ಇತರೆ ಗುರುತಿನ ಚೀಟಿಯನ್ನು ಅಪ್ಲೋಡ್ ಮಾಡಿ ಮೊಬೈಲ್ ಬ್ಲಾಕ್ ಮಾಡುವ ವಿಧಾನವನ್ನು ತಿಳಿಸಲಾಗಿದೆ.

Exit mobile version