Site icon Kannada News-suddikshana

ನನಗೆ ಮತ್ತು ಹಲವರಿಗೆ ನೊಟೀಸ್ ಬಂದಿದೆ, ಸಿಎಂ ಪುತ್ರನಿಗೆ ಯಾಕಿಲ್ಲ: ಇದ್ಯಾವ ಧರ್ಮ ಎಂದ್ರು ಶಾಸಕ ಬಸವರಾಜ್ ಶಿವಗಂಗಾ?

ಬಸವರಾಜ್ ಶಿವಗಂಗಾ

ದಾವಣಗೆರೆ: ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಪಕ್ಷಕ್ಕೆ ಮುಜುಗರ ತರುವ ರೀತಿ ಮಾತನಾಡದಿದ್ದರೂ ನನಗೆ ನೊಟೀಸ್ ಕೊಡಲಾಗಿದೆ. ಮತ್ತೆ ಇತರರಿಗೂ ನೊಟೀಸ್ ಬಂದಿದೆ. ಸಿಎಂ ಸಿದ್ದರಾಮಯ್ಯರ ಪುತ್ರ ಅವರು ಮುಜುಗರ ರೀತಿ ಮಾತನಾಡಿದರೂ
ಯಾವುದೇ ಕ್ರಮ ಆಗಿಲ್ಲ. ಇದ್ಯಾವ ಧರ್ಮ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ್ ವಿ. ಶಿವಗಂಗಾ ಪ್ರಶ್ನಿಸಿದ್ದಾರೆ.

READ ALSO THIS STORY: ಮುಜುಗರ ತರುವ ಹೇಳಿಕೆಗೆ ಹೈಕಮಾಂಡ್ ಬ್ರೇಕ್ ಹಾಕಲೇಬೇಕು: ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಬುಸುಗುಟ್ಟಿದ ಬಸವರಾಜ್ ಶಿವಗಂಗಾ!

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ನೊಟೀಸ್ ಕೊಟ್ಟಿದ್ದಾರೆ. ಮುಖ್ಯಮಂತ್ರಿ ವಿಚಾರ ಮಾತನಾಡಿಲ್ಲ. ಬಹಳಷ್ಟು ಜನರಿಗೆ ನೀಡಿದ್ದಾರೆ. ಹೈಕಮಾಂಡ್ ಗಮನಿಸಬೇಕು. ಯತೀಂದ್ರ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ಅವರು ಮೊದಲು ಏನು ಮಾತನಾಡಿದ್ದರು? ಆಮೇಲೆ ಏನು ಮಾತನಾಡಿದ್ದಾರೆ ಎಂಬುದು ಮಾಧ್ಯಮಗಳಲ್ಲಿ ಬಂದಿದೆ. ಪದೇ ಪದೇ ಮಾತನಾಡಲ್ಲ. ಡಿಸೆಂಬರ್ ನಂತರ ಕ್ರಾಂತಿ ಆಗಿಯೇ ಆಗುತ್ತದೆ. ಈಗ ಮಾತನಾಡುವಲ್ಲ. ಎಲ್ಲರೂ ನವೆಂಬರ್ ಎನ್ನುತ್ತಿದ್ದಾರೆ. ನಾನು ಡಿಸೆಂಬರ್ ಮುಗಿದ ಬಳಿಕ ಅಂದರೆ ಮುಂದಿನ ವರ್ಷದ ಜನವರಿಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರು ತೂಕದ ರಾಜಕಾರಣಿ. ಒಬ್ಬ ಉತ್ತಮ ಆಡಳಿತಗಾರರು. ಅವರು ಹೀಗೆಲ್ಲಾ ಬಾಲಿಶ ಮಾತನಾಡುವಂತೆ ಎಂದಿಗೂ ಯಾರಿಗೂ ಹೇಳಿಲ್ಲ. ಹೇಳುವುದೂ ಇಲ್ಲ. ಕುಟುಂಬದವರನ್ನು ರಾಜಕೀಯಕ್ಕೆ ಸಿದ್ದರಾಮಯ್ಯ ಅವರು ತಂದಿರಲಿಲ್ಲ. ರಾಜಕೀಯ ಕೊನೆಗಾಲದಲ್ಲಿದ್ದಾರೆಂದು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ನಾಲ್ವರು ಅವರ ಬೇಳೆ ಕಾಳು ಬೇಯಿಸಿಕೊಳ್ಳಲು ಯತ್ನಿಸುತ್ತಾ ಗೊಂದಲಮಯ ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಇಳಿಯುತ್ತೇನೆ ಎಂದೂ ಸಿದ್ದರಾಮಯ್ಯರು ಹೇಳಿಲ್ಲ ಎಂದು ಹೇಳಿದರು.

Exit mobile version