SUDDIKSHANA KANNADA NEWS/ DAVANAGERE/DATE:04_09_2025
ದಾವಣಗೆರೆ: ನನ್ನ ಮೇಲೆ ಎಫ್ ಐಆರ್ ಹಾಕಿದಾಕ್ಷಣ ಹೆದರುವುದಿಲ್ಲ. ನಾನು ಕಾನೂನಿಗೆ ಗೌರವ ನೀಡುತ್ತೇನೆ ಎಂದು ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಮತ್ತೆ ಸವಾಲು ಹಾಕಿದ್ದಾರೆ.
READ ALSO THIS STORY: ದಾವಣಗೆರೆ ಜಿಲ್ಲೆಯಲ್ಲಿ ಡಿಜೆ ಸಿಸ್ಟಂ ಬಳಕೆ ನಿಷೇಧ ನಿರ್ಧಾರದಲ್ಲಿ ಬದಲಾವಣೆ ಇಲ್ಲವೇ ಇಲ್ಲ: ಡಿಸಿ ಗಂಗಾಧರ ಸ್ವಾಮಿ ಖಡಕ್ ಮಾತು!
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ದಾವಣಗೆರೆ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರನ್ನು “ಪೊಮೆರೇನಿಯನ್ ನಾಯಿ”ಗೆ ಹೋಲಿಸಿದ ಬಳಿಕ ವಿವಾದ ಭುಗಿಲೆದ್ದ ಕಾರಣ ಈ ಸ್ಪಷ್ಟನೆ ನೀಡಿದ್ದಾರೆ.
ನಾನು ಕಾನೂನು ಗೌರವಿಸುತ್ತೇನೆ. ಪೊಲೀಸರು ನನ್ನ ವಿರುದ್ದ ಎಫ್ ಐಆರ್ ದಾಖಲಿಸಿದಾಕ್ಷಣ ಮಾತು ನಿಲ್ಲಿಸುತ್ತೇನೆಂದುಕೊಂಡಿದ್ದರೆ ಆಗದು. ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್
ಅವರು ಶ್ವಾನಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ನನ್ನ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾನು ಯಾವುದೇ ಎಫ್ಐಆರ್ ಗೆ ಹೆದರುವುದಿಲ್ಲ ಎಂದು ತಿಳಿಸಿದರು.
ನನ್ನ ವಿರುದ್ಧ ಮೂರು ಸೆಕ್ಷನ್ ಗಳನ್ನು ಹಾಕಿದ್ದಾರೆ. ಅದರಲ್ಲಿ ಒಂದು ಒಂದು ಜಾಮೀನು ರಹಿತ ಸೆಕ್ಷನ್. ನನ್ನ ಆಪ್ತ ಸಹಾಯಕ ಎಫ್ ಐಆರ್ ಪ್ರತಿ ಕೇಳಲು ಹೋದಾಗ ಅದು ಸಚಿವರ ಪ್ರಕರಣವಾದ್ದರಿಂದ ಪ್ರತಿ ಕೊಡಲು ಆಗಲ್ಲ ಎಂದು ಹೇಳಿದ್ದಾರೆ. ಆನ್ ಲೈನ್ ನಲ್ಲಿ ಪಡೆಯುವಂತೆ ಸೂಚಿಸಿದ್ದಾರೆ. ಕಾನೂನಿನ ಬಗ್ಗೆ ಗೌರವವಿದೆ. ನ್ಯಾಯಾಲಯದ ಮೂಲಕವೇ ಇದಕ್ಕೆ ಉತ್ತರ ಕೊಡುತ್ತೇನೆ ಎಂದು ಹೇಳಿದರು.
ಸಚಿವರು ತಾವು ಕಬಳಿಸಿರುವ ಜಮೀನನ್ನು ರೈತರಿಗೆ ಕೊಡಿಸಲು ಹೋರಾಟ ಮುಂದುವರಿಸುತ್ತೇನೆ. ಒದ್ದು ಒಳಹಾಕಿಸ್ತೇನೆ ಎಂದಿರುವ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ವಿರುದ್ಧವೂ ಪ್ರಕರಣ ದಾಖಲಿಸಲಿ ಎಂದು ಬಿ. ಪಿ. ಹರೀಶ್ ಒತ್ತಾಯಿಸಿದ್ದಾರೆ.