Site icon Kannada News-suddikshana

Minister Happy: ಧ್ವಜಾರೋಹಣದ ಬಳಿಕ ಇಂದು ನನಗೆ ತುಂಬಾ ಖುಷಿಯಾಗುತ್ತಿದೆ ಎಂದಿದ್ಯಾಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್…?

SUDDIKSHANA KANNADA NEWS/ DAVANAGERE/ DATE:15-08-2023

ದಾವಣಗೆರೆ: ಇಂದು ನನಗೆ ತುಂಬಾ ಖುಷಿಯಾಗುತ್ತಿದೆ. ಕಳೆದ ಐದು ವರ್ಷಗಳ ಕಾಲ ಜಿಲ್ಲೆಯ ಯಾವ ಶಾಸಕರು ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿರಲಿಲ್ಲ. ಈ ಭಾಗ್ಯ ನನಗೆ ಸಿಕ್ಕಿದೆ. ಜಿಲ್ಲೆಯ ಶಾಸಕರೊಬ್ಬರು ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದ್ದು ಸಂತಸದ ವಿಚಾರ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಸಚಿವ (Minister) ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯವನ್ನು ಬಿಜೆಪಿ ಆಳಿದರೂ ಜಿಲ್ಲೆಯಲ್ಲಿ ಯಾವ ಸಚಿವ(Minister)ರು ಇರಲಿಲ್ಲ. ಹೊರಗಿನ ಶಾಸಕರು ಇಲ್ಲಿಗೆ ಬಂದು ಧ್ವಜಾರೋಹಣ ನೆರವೇರಿಸುತ್ತಿದ್ದರು. ಜಿಲ್ಲೆಯಲ್ಲಿ ಐವರು ಶಾಸಕರಿದ್ದರೂ ಮಂತ್ರಿಯಾಗಲಿಲ್ಲ. ಮಂತ್ರಿಯಾಗಿದ್ದರೆ ಜಿಲ್ಲೆ ಅಭಿವೃದ್ಧಿಗೆ ಸಹಕಾರಿಯಾಗುತಿತ್ತು. ಈಗ ನಾವು ಗೆದ್ದು ಸಚಿವರಾಗಿದ್ದೇವೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ: 

Sulekere: ಸೂಳೆಕೆರೆ ನೀರಿನ ರಿಪೋರ್ಟ್ ಬಂದಿದೆ, ಕೆರೆಗೆ ತ್ಯಾಜ್ಯ ಹೋಗದಂತೆ ತಡೆಗೆ ಸೂಚನೆ: ಎಸ್. ಎಸ್. ಮಲ್ಲಿಕಾರ್ಜುನ್

ಜಲಸಿರಿ ಯೋಜನೆಗೆ ಚಾಲನೆ ದೊರಕಿಲ್ಲ. ಆತುರಾತುರವಾಗಿ ಬಿಜೆಪಿಯವರು ಉದ್ಘಾಟನೆ ನೆರವೇರಿಸಿದ್ದಾರೆ. ಕೆಲಸವೇ ಪೂರ್ತಿಯಾಗಿಲ್ಲ. ಅಲ್ಲಲ್ಲಿ ಕಳಪೆ ಕಾಮಗಾರಿಯಾಗಿವೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಜಲಸಿರಿ ಯೋಜನೆಯಡಿ ನೀರು ಬಂದಿಲ್ಲ ಎಂದರೆ ಚಾಲನೆ ನೀಡದೇ ಹೇಗೆ ಬರುತ್ತದೆ. ನಾವು ಅಧಿಕಾರದಲ್ಲಿದ್ದಾಗ ಜಲಸಿರಿ ಯೋಜನೆ ತಂದಿದ್ದು. ಅದು ಅಲ್ಲೇ ನಿಂತಿದೆ. ವೇಗವಾಗಿ ನಡೆದೇ ಇಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಬಿಜೆಪಿಯವರು ಜಿಲ್ಲೆಯಲ್ಲಿ ಮಾಡಬಾರದ ಕೆಲಸ ಮಾಡಿದ್ದಾರೆ. ಜಲಮಿಷನ್ ಯೋಜನೆ, ಜಲಸಿರಿ ಸೇರಿದಂತೆ ಹಲವು ಯೋಜನೆಗಳನ್ನು ಹಳ್ಳ ಹಿಡಿಸಿದ್ದಾರೆ. ಯಾವ ಕೆಲಸವನ್ನೂ ಸರಿಯಾಗಿ ನಿರ್ವಹಿಸಿಲ್ಲ. ಐದು ವರ್ಷಗಳ ಕಾಲ ಏನು ಮಾಡಿದ್ದಾರೆ ಎಂಬ ಕುರಿತು ನೀವು ಬರೆಯಬೇಕಿತ್ತು. ಹೆಚ್ಚಾಗಿ ಮಾಧ್ಯಮಗಳಲ್ಲಿ ಬಂದಿದ್ದರೆ ಜನಸಾಮಾನ್ಯರಿಗೂ ತಿಳಿಯುತಿತ್ತು. ಎಲ್ಲಾ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದು ಮಲ್ಲಿಕಾರ್ಜುನ್ ತಿಳಿಸಿದರು.

Exit mobile version