Site icon Kannada News-suddikshana

ಪ್ರತಿ ಲೀಟರ್ ‘ಹಾಲಿಗೆ’ 2.10 ರೂ ಹೆಚ್ಚಳ: ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು : ನಂದಿನಿ ಹಾಲಿನ ದರ ಹೆಚ್ಚಿಸಲಾಗಿದೆ ಎಂದು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಭೀಮನಾಯ್ಕ್ ತಿಳಿಸಿದ್ದಾರೆ.ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಲೀಟರ್‌ ಹಾಲಿನ ದರವನ್ನ 2.10 ರೂ. ಹಾಗೂ ಅರ್ಧ ಲೀಟರ್‌ ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿದೆ.

ಆದ್ರೆ ಗ್ರಾಹಕರಿಗೆ ಸಿಗುತ್ತಿದ್ದ 1,000 ಎಂಎಲ್‌ (1 ಲೀಟರ್)‌ ಪ್ಯಾಕೆಟ್‌ ಹಾಲು ಇನ್ಮುಂದೆ 1,050 ಎಂಎಲ್‌ ಹಾಗೂ ಅರ್ಧ ಲೀಟರ್‌ ಪ್ಯಾಕೆಟ್‌ ಹಾಲು 550 ಎಂಎಲ್‌ ಹೆಚ್ಚುವರಿ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ. ನಾಳೆಯಿಂದ ಈ ದರ ನಾಳೆಯಿಂದ ಅನ್ವಯವಾಗಲಿದೆ ಎಂದು ತಿಳಿಸಿದರು.

ಮೊಸರು ಇನ್ನಿತರ ಯಾವುದೇ ಹಾಲಿನ ಉತ್ಪನ್ನದ ದರ ಏರಿಕೆ ಮಾಡಲ್ಲ. ಕೇರಳದಲ್ಲಿ ಒಂದು ಲೀಟರ್ ಹಾಲಿನ ಬೆಲೆ 52 ರುಪಾಯಿ ಇದೆ. ಗುಜರಾತ್​​​​ನಲ್ಲಿ ಅಮುಲ್ ಒಂದು ಲೀಟರ್​ಗೆ 56 ರೂ. ಮಹಾರಾಷ್ಟ್ರದಲ್ಲಿ 56 ರೂ. ದೆಹಲಿ ಮದರ್ ಡೈರಿಯ ಹಾಲಿನ ಬೆಲೆ 54 ರೂ. ಇದೆ ಎಂದರು.

Exit mobile version