Site icon Kannada News-suddikshana

ಪಟಾಕಿ ಸಿಡಿಸುವಾಗ ವಹಿಸಿ ಎಚ್ಚರ: ಶಾಮನೂರು ಶಿವಶಂಕರಪ್ಪ ಸಂದೇಶ

SUDDIKSHANA KANNADA NEWS/ DAVANAGERE/ DATE:30-10-2024

ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಾಕಲಾಗಿರುವ ಪಟಾಕಿ ಅಂಗಡಿಗಳನ್ನು ಕಾಂಗ್ರೆಸ್ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಈ ಬಾರಿ ಮಳೆ ಮತ್ತು ಬೆಳೆ ಚೆನ್ನಾಗಿ ಆಗಿದೆ. ಬಡಕೂಲಿ ಕಾರ್ಮಿಕರು, ಬಡವರು ಸಂತೋಷದಿಂದ ದೀಪಾವಳಿ ಹಬ್ಬವನ್ನು ಆಚರಿಸಿ ಹಾಗೂ ಪಟಾಕಿ ಸಿಡಿಸುವಾಗ ಜಾಗೃತವಾಗಿರಿ ಎಂದು
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು.

ಈ ಸಂದರ್ಭದಲ್ಲಿ ಪಟಾಕಿ ಸಂಘದ ಗೌರವಾಧ್ಯಕ್ಷ ಹಾಗೂ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಸಂಘದ ಶ್ರೀನಿವಾಸ್, ಸಿದ್ದಣ್ಣ, ರಮೇಶ್ ಗದ್ದಾಳೆ, ರಮೇಶ್ ಜಾಧವ್, ಪಾಂಡುರಂಗಪ್ಪ ಶಿವು ಐನಳ್ಳಿ, ವೈ. ಮಲ್ಲೇಶ್, ರವಿಕುಮಾರ್, ಕಾಂತರಾಜ್, ರಾಜು, ಹಾಲೇಶಪ್ಪ, ಜಗನ್ನಾಥ್ ಮತ್ತಿತರರು ಹಾಜರಿದ್ದರು.

Exit mobile version