Site icon Kannada News-suddikshana

Mayakonda: ಮಾಯಕೊಂಡದ ನೇರ್ಲಿಗೆಯಲ್ಲಿ ಹೆತ್ತ ತಾಯಿಯ ತಲೆಗೆ ಒಡೆದು ಕೊಂದ ಪಾಪಿ ಪುತ್ರ…!

SUDDIKSHANA KANNADA NEWS/ DAVANAGERE/ DATE:11-10-2023

ದಾವಣಗೆರೆ: ಜನ್ಮ ಕೊಟ್ಟ ತಾಯಿಯ ತಲೆಗೆ ಒಡೆದು ಪಾಪಿ ಪುತ್ರನೊಬ್ಬ ಕೊಂದ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ (Mayakonda) ದ ನೆರ್ಲಿಗೆ ಗ್ರಾಮದಲ್ಲಿ ನಡೆದಿದೆ.

Read Also This Story: 

Cricket World Cup Song: ವರ್ಲ್ ಕಪ್ ಕ್ರಿಕೆಟ್ ಫೀವರ್: ಬೆಣ್ಣೆನಗರಿ ಮಂದಿ ರೂಪಿಸಿದ್ದಾರೆ ಭಾರತೀಯ ಕ್ರಿಕೆಟ್ ಗೀತೆ, ಗೆದ್ದು ಬಾ ಇಂಡಿಯಾ ಹಾಡು: ಐದು ಭಾಷೆಗಳಲ್ಲಿ ರೂಪುಗೊಂಡಿರುವ ಇದರ ವಿಶೇಷತೆ ಏನು…?

ನೇರ್ಲಿಗೆ ಗ್ರಾಮದ ಲೋಕೇಶ್ ನಾಯ್ಕ ತಾಯಿಯನ್ನು ಕೊಂದ ಪಾಪಿ ಮಗ. ಶಾಂತಿಬಾಯಿ ಹತ್ಯೆಗೀಡಾದ ಮಹಿಳೆ (70).

ಲೋಕೇಶ್ ನ ಪತ್ನಿ ತವರು ಮನೆಗೆ ಹೋಗಿದ್ದರು. ಪ್ರತಿನಿತ್ಯವೂ ಕುಡಿದು ಬಂದ ಜಗಳವಾಡುತ್ತಿದ್ದ ಲೋಕೇಶ್ ನಾಯ್ಕ ಸೋಮವಾರ ರಾತ್ರಿ ಕಂಠಪೂರ್ತಿ ಕುಡಿದು ಬಂದಿದ್ದ. ಈ ವೇಳೆ ಕೈಗೆ ಸಿಕ್ಕ ಹೆಂಚಿನಿಂದ ತನ್ನ ತಾಯಿಯ ತಲೆಗೆ ಹೊಡೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಶಾಂತಿಬಾಯಿ ಕೊನೆಯುಸಿರೆಳೆದಿದ್ದಾರೆ. ಆರೋಪಿ ಲೋಕೇಶ್ ನಾಯ್ಕ್ ನನ್ನು ಮಾಯಕೊಂಡ (Mayakonda)  ಪೊಲೀಸರು ಬಂಧಿಸಿದ್ದಾರೆ.

Exit mobile version