Site icon Kannada News-suddikshana

ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ದಸರಾ ಮಹೋತ್ಸವ ಪ್ರಯುಕ್ತ ಸಾಮೂಹಿಕ ವಿವಾಹ: ಸಚಿವ-ಸಂಸದರು ಭಾಗಿ

ದಸರಾ

SUDDIKSHANA KANNADA NEWS/DAVANAGERE/DATE:03_10_2025

ದಾವಣಗೆರೆ: ದಸರಾ ಮಹೋತ್ಸವದ ಪ್ರಯುಕ್ತ ನಗರದೇವತೆ ಶ್ರೀ ದುರ್ಗಾಂಭಿಕಾ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸುದ್ದಿಯನ್ನೂ ಓದಿ: ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನಕ್ಕೆ 44 ಗ್ರಾಮಗಳು ಅಭಿವೃದ್ಧಿಗಾಗಿ ಆಯ್ಕೆ, ಗ್ರಾಮಸಭೆ: ಡಿಸಿ

ಪ್ರತಿವರ್ಷವೂ ನವರಾತ್ರಿ ಹಬ್ಬದ ಅಂಗವಾಗಿ ಸಾಮೂಹಿಕ ವಿವಾಹ ಏರ್ಪಡಿಸುತ್ತಾ ಬಂದಿದ್ದು, ಈ ಬಾರಿಯೂ ಸಹ ಸಾಮೂಹಿಕ ವಿವಾಹದಲ್ಲಿ 21 ಜೋಡಿ ನೂತನ ದಾಂಪತ್ಯಕ್ಕೆ ಅಡಿಯಿಟ್ಟರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಆಶೀರ್ವಾದದಿಂದ ನವಜೋಡಿಯ ದಾಂಪತ್ಯ ಜೀವನವು ಸುಖ, ಶಾಂತಿ ಮತ್ತು ಸಮೃದ್ಧಿಯಿಂದ ಕೂಡಿರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಆವರಗೊಳ್ಳ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಉಪ ಮಹಾಪೌರರಾದ ಗೋಣೆಪ್ಪ, ಉಮೇಶ್‌ರಾವ್ ಸಾಳಂಕಿ, ಹನುಮಂತರಾವ್ ಸಾವಂತ್, ಬಡಗಿ ರಾಮಕೃಷ್ಣ, ಸೊಪ್ಪಿನ ಗುರುರಾಜ್, ಹನುಮಂತ ಜಾಧವ್, ಶಂಕರರಾವ್ ಸಿಂಧೆ, ಮುದೇಗೌಡ್ರು ವಿಶ್ವನಾಥ, ಜಯಪ್ರಕಾಶ್ ಜೆ.ಕೆ., ಗೌಡ್ರು ಸುರೇಶ್, ಕರಿಗಾರ ಬಸಪ್ಪ, ಬಾಬುರಾವ್ ಸಾಳಂಕಿ, ಕವಿರಾಜ್, ಶ್ರೀನಿವಾಸ್ ಪವಾರ್, ದೇವಸ್ಥಾನ ಸಮಿತಿಯವರು, ಭಕ್ತಾದಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅವರ ಜ್ಞಾಪಕಾರ್ಥವಾಗಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

Exit mobile version