Site icon Kannada News-suddikshana

ಕಾರ್ಮಿಕರಿಗೆ ಗುದ್ದಿದ ಜನಪ್ರಿಯ ನಟಿ ಊರ್ಮಿಳಾ ಕೊಠಾರೆ ಪ್ರಯಾಣಿಸುತ್ತಿದ್ದ ಕಾರು: ಓರ್ವ ಕಾರ್ಮಿಕ ಸಾವು, ಕೇಸ್ ದಾಖಲು

SUDDIKSHANA KANNADA NEWS/ DAVANAGERE/ DATE:28-12-2024

ಮುಂಬೈ: ಮುಂಬೈನಲ್ಲಿ ಮೆಟ್ರೋ ಕಾರ್ಮಿಕರ ಮೇಲೆ ಜನಪ್ರಿಯ ಮರಾಠಿ ನಟಿ ಊರ್ಮಿಳಾ ಕೊಠಾರೆ ಪ್ರಯಾಣಿಸುತ್ತಿದ್ದ ಕಾರು ಹರಿದ ಪರಿಣಾಮ ಓರ್ವ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಮುಂಬೈನಲ್ಲಿ ಸಂಭವಿಸಿದ ಅಪಘಾತವು ಕಾಂದಿವಲಿಯಲ್ಲಿ ನಟಿ ಊರ್ಮಿಳಾ ಕೊಠಾರೆ ಒಡೆತನದ ಕಾರು ಅವರಿಗೆ ಡಿಕ್ಕಿ ಹೊಡೆದು ಕಾರ್ಮಿಕನೊಬ್ಬನನ್ನು ಬಲಿ ತೆಗೆದುಕೊಂಡಿತು. ಅಪಘಾತದಲ್ಲಿ ನಟಿ ಕೊಠಾರೆ ಮತ್ತು ಚಾಲಕ ಕೂಡ ಗಾಯಗೊಂಡಿದ್ದಾರೆ.

ಊರ್ಮಿಳಾ ಸಿನಿಮಾ ಚಿತ್ರೀಕರಣ ಮುಗಿಸಿ ವಾಪಸ್ಸಾಗುತ್ತಿದ್ದಾಗ ಪೊಯಿಸರ್ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಇಬ್ಬರು ಮೆಟ್ರೋ ಕಾರ್ಮಿಕರ ಮೇಲೆ ಗುದ್ದಿದೆ. ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬನನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತ ಸಂಭವಿಸಿದಾಗ ಕಾರು ಅತಿವೇಗದಲ್ಲಿ ಚಲಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನ ಏರ್‌ಬ್ಯಾಗ್‌ಗಳು ಓಪನ್ ಆದ ಕಾರಣ ನಟಿ ಗಂಭೀರ ಗಾಯಗಳಿಂದ ಪಾರಾಗಿದ್ದಾರೆ. ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಊರ್ಮಿಳಾ ಕಾನೇಟ್ಕರ್ ಮರಾಠಿ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು. ಅವರು ‘ದುನಿಯಾದಾರಿ,’ ‘ಶುಭಮಂಗಳ ಸಾವಧಾನ್,’ ಮತ್ತು ‘ತಿ ಸದ್ಯ ಕೇ ಕರ್ತೆ’ ನಂತಹ ಕೆಲವು ಜನಪ್ರಿಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಕಿರುತೆರೆಯ ಹಿಟ್ ಶೋ ‘ತುಜೆಚ್ ಮಿ ಗೀತ್ ಗಾತ್ ಅಹೆ’ ಮೂಲಕ ದೂರದರ್ಶನದಲ್ಲಿ ಗಮನ ಸೆಳೆದರು, ಅವರ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುವ ಮುನ್ನ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದರು.

Exit mobile version