ಬೆಂಗಳೂರು: ಮರಾಠ ಸಮುದಾಯದ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ವತಿಯಿಂದ 2025-26 ನೇ ಸಾಲಿಗೆ ಆಹಾರ ವಾಹಿನಿ ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇವಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಲ್ಲಿ ನಿಗಮದಿಂದ ವಾಹನ ಖರೀದಿಗೆ ರೂ. 3.00 ಲಕ್ಷಗಳ ಸಹಾಯಧನವನ್ನು ಪಡೆಯಲು ಸೇವಾಸಿಂಧು ತಂತ್ರಾಂಶದ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಯಾರಿಗೆ ಅನ್ವಯ?
ಈ ಯೋಜನೆಯು ಮರಾಠ ಜನಾಂಗದಲ್ಲಿ ಯಾರ್ಯಾರು ಅರ್ಜಿ ಸಲ್ಲಿಸಬಹುದು ಎಂಬ ಕುರಿತ ಮಾಹಿತಿ ಇಲ್ಲಿದೆ.
ಪ್ರವರ್ಗ 3-ಬಿ ಅಡಿಯಲ್ಲಿ 2(ಎ) ರಿಂದ 2 (ಎಫ್) ವರೆಗೆ ಬರುವ (ಎ) ಮರಾಠ
ಮರಾಠ (ಬಿ) ಅರೆಕ್ಷತ್ರಿಯ, ಅರೆ ಮರಾಠ
ಆರ‍್ಯ ಮರಾಠ (ಸಿ), ಆರ್ಯ, ಅರ್ಯರು (ಡಿ)
ಕೊಂಕಣ ಮರಾಠ (ಇ)
ಕ್ಷತ್ರಿಯ ಮರಾಠ/ಕ್ಷತ್ರಿಯ ಮರಾಠ (ಎಫ್), ಕುಳವಾಡಿ ಜಾತಿ
ಏನೆಲ್ಲಾ ದಾಖಲೆಗಳು ಬೇಕು?
ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ಆಧಾರ್ ಕಾರ್ಡಿನಲ್ಲಿರುವಂತೆ ಅರ್ಜಿದಾರರ ಹೆಸರು ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ಪುಸ್ತಕದಲ್ಲಿಯೂ ಇರುವಂತೆ ಹೊಂದಾಣಿಕೆಯಾಗಬೇಕು
ಕುಟುಂಬ ವಾರ್ಷಿಕ ವರಮಾನ 3 ಲಕ್ಷ ಒಳಗಿರಬೇಕು
ವಯಸ್ಸು 21 ರಿಂದ 45 ವರ್ಷ ಒಳಗಿನವರಾಗಿರಬೇಕು
ಒಂದು ಬಾರಿ ನಿಗಮದ ಯಾವುದಾದರು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸುವಂತಿಲ್ಲ.
ಅರ್ಜಿ ಎಲ್ಲಿ ಸಲ್ಲಸಬೇಕು?
ಆಸಕ್ತರು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ಮೂಲಕ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಮಾ. 5 ರೊಳಗಾಗಿ ಸಲ್ಲಿಸುವಂತೆ ಕ. ಮ. ಸ. ಅ. ನಿ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ನಿಗಮದ ಜಾಲತಾಣ http://kmcdc.karnataka.gov.in/kn ಇಲ್ಲಿ ಅರ್ಜಿ ಸಲ್ಲಿಸಬಹುದು.
- 3 Lakh Subsidy for EV Goods Vehicle
- 3 ಲಕ್ಷ ಸಹಾಯಧನ
- Ahara Vahini Scheme
- Karnataka Government Schemes for Maratha.
- KMCDC Karnataka
- Maratha Community Schemes 2025-26
- Maratha Development Corporation
- Mobile Food Stall Subsidy
- Seva Sindhu Application
- ಆಹಾರ ವಾಹಿನಿ ಯೋಜನೆ
- ಇವಿ ಗೂಡ್ಸ್ ವಾಹನ ಯೋಜನೆ
- ಉಚಿತ ಆಹಾರ ಮಳಿಗೆ ವಾಹನ.
- ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ
- ಮರಾಠ ಅಭಿವೃದ್ಧಿ ನಿಗಮ
- ಮರಾಠ ಸಮುದಾಯದ ಸೌಲಭ್ಯಗಳು
- ಸೇವಾಸಿಂಧು ಅರ್ಜಿ





Leave a comment