SUDDIKSHANA KANNADA NEWS/DAVANAGERE/DATE:30_10_2025
ದಾವಣಗೆರೆ: ಕುರುಬರ ಸಂಘ ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮನು ಎಂ. ದೇವನಗರಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: 3 ವರ್ಷವಾದ್ರೂ ಇಲ್ಲೇ ಠಿಕಾಣಿ ಹೂಡಿರೋ ಪಾಲಿಕೆ ಆಯುಕ್ತೆಯಿಂದ ಸಚಿವ, ಸಂಸದೆಗೆ ಕೆಟ್ಟ ಹೆಸರು: ಮಾದಿಗ ದಂಡೋರ ಸಮಿತಿ ಗಂಭೀರ ಆರೋಪ!
ರಾಜ್ಯಾಧ್ಯಕ್ಷದ ಪ್ರಭುಲಿಂಗ ದೊಡ್ಮಣಿ ಇವರ ಆದೇಶದ ಮೇರೆಗೆ ಇವರನ್ನು ದಾವಣಗೆರೆ ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಇಂದಿನಿಂದಲೇ ಜಿಲ್ಲೆಯಾದ್ಯಂತ ಹಾಲುಮತ ಕುರುಬ ಸಮುದಾಯದ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಹಕ್ಕುಗಳ ಪರ ನ್ಯಾಯಯುತ ಸಂಘಟನೆಗೆ ಹಾಗೂ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡು ಶ್ರಮಿಸುವಂತೆ ಜಿಲ್ಲಾಧ್ಯಕ್ಷ ಪಿ.ಬಿ. ಬೀರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


