Site icon Kannada News-suddikshana

ಮಂಗಳೂರು: ಅನ್ಯಕೋಮಿನ ಇಬ್ಬರು ವಿದ್ಯಾರ್ಥಿಗಳ ಜೊತೆ ಹಿಂದೂ ಯುವತಿ ಸುತ್ತಾಟ..! ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಮಂಗಳೂರು: ಅನ್ಯಕೋಮಿನ ಇಬ್ಬರು ವಿದ್ಯಾರ್ಥಿಗಳ ಜೊತೆ ಹಿಂದೂ ಯುವತಿ ಸುತ್ತಾಟ ಆರೋಪ ಮಾಡಲಾಗಿದ್ದು, ಕಾರಿನಲ್ಲಿದ್ದ ತಂಡವನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿರುವಂತಹ ಘಟನೆ ಮಂಗಳೂರು  ಹೊರವಲಯದ ಮುಕ್ಕ ಎಂಬಲ್ಲಿ ನಡೆದಿದೆ.

ಮುಕ್ಕ ಸಮೀಪ ಕಾರಿನಲ್ಲಿ ಇಬ್ಬರು ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿ ಇದ್ದಳು ಎನ್ನಲಾಗಿದೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಯುವತಿಯೊಂದಿಗೆ ಬಿಎಂಡಬ್ಲ್ಯು ಕಾರಿನಲ್ಲಿ ಹೊಗುತ್ತಿರಬೇಕಾದರೆ, ಸ್ಕೂಲ್​​ ಬಸ್​ಗೆ ಡಿಕ್ಕಿ ಹೊಡೆದಿದ್ದಾರೆ.

ಹೀಗಾಗಿ ಬಸ್ ಚಾಲಕ‌ನ ಜೊತೆ ತಂಡ ಜಗಳವಾಡುತ್ತಿದ್ದರು. ಜನ ಸೇರುತ್ತಿದ್ದಂತೆ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾರೆ, ಆದರೆ ಕಾರು ಕೈಕೊಟ್ಟಿದೆ. ಬಳಿಕ ಜನರು ಇವರನ್ನು ಗಮನಿಸಿದ್ದು ಇದು ಅನ್ಯಕೋಮಿನ ಜೋಡಿ ಎಂಬುದು ಬೆಳಕಿಗೆ ಬಂದಿದೆ.

BMW ಕಾರಿಗೆ ಫುಲ್ ಟಿಂಟ್ ಅಳವಡಿಸಿದ್ದು, ಹಲವು ಅನುಮಾನಕ್ಕೂ ಎಡೆಮಾಡಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಬಳಿಕ ಠಾಣೆಗೆ ಯುವತಿ ಪೋಷಕರನ್ನು ಕರೆಸಿ ಬಿಟ್ಟು ಕಳುಹಿಸಲಾಗಿದೆ.

Exit mobile version