Site icon Kannada News-suddikshana

ಇಂಡಿಗೋ ವಿಮಾನದ ವಾಶ್ ರೂಂನಲ್ಲಿ ಸಿಗರೇಟ್ ಸೇದಿದ ಯುವಕ; ಪ್ರಕರಣ ದಾಖಲು

ಮಂಗಳೂರು: ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ವಿಮಾನದಲ್ಲಿ ಸಿಗರೇಟ್ ಸೇದಿದ ಆರೋಪದ ಮೇಲೆ ಮಂಜೇಶ್ವರ ನಿವಾಸಿ ಮುಶಾದಿಕ್ ಹುಸೇನ್ (24) ಎಂಬಾತನ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಸ್ಟ್ 31 ರ ಸಂಜೆ ಅಬುದಾಬಿಯಿಂದ ಇಂಡಿಗೋ ವಿಮಾನದ ಮೂಲಕ ಮುಶಾದಿಕ್ ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುವ ಮುನ್ನವೇ ಮುಷಾದಿಕ್ ವಿಮಾನದ ವಾಶ್ ರೂಂನಲ್ಲಿ ಸಿಗರೇಟ್ ಸೇದಿದ್ದಾರೆ ಎನ್ನಲಾಗಿದೆ. ಬಳಿಕ ವಿಮಾನದ ಅಧಿಕಾರಿಗಳು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Exit mobile version