Site icon Kannada News-suddikshana

ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯಕ್ಕೆ ಮಂಗಳಮುಖಿಯನ್ನು ಅತಿಥಿ ಉಪನ್ಯಾಸಕಿಯಾಗಿ ನೇಮಕ

ಬಳ್ಳಾರಿ: ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಮಂಗಳಮುಖಿ ನೇಮಕಗೊಂಡು ಎಲ್ಲಾರ ಗಮನ ಸೆಳೆದಿದ್ದಾರೆ.ಮಂಗಳಮುಖಿಯೊಬ್ಬರು ವಿ.ವಿ ಗೆ ಉಪನ್ಯಾಸಕಿಯಾಗಿ ನೇಮಕಗೊಂಡಿರುವುದು ರಾಜ್ಯದಲ್ಲೇ ಇದು ಮೊದಲ ಬಾರಿಗೆ ಎನ್ನುವುದು ವಿಶೇಷ.

ಜಿಲ್ಲೆಯ ಕುರುಗೋಡು ತಾಲ್ಲೂಕಿನ ರೇಣುಕಾ ಪೂಜಾರಿ (ಮಲ್ಲೇಶ್. ಕೆ) ಎಂಬ ಇವರು ವಿ ಎಸ್ ಕೆ ವಿವಿಯಲ್ಲಿ ಉಪನ್ಯಾಸಕರಾಗಿ ನೇಮಕಗೊಂಡಿದ್ದಾರೆ.

ಕುರುಗೋಡು ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಇವರು ವಿ ಎಸ್ ಕೆ ವಿವಿಯಲ್ಲೇ ತಮ್ಮ ಕ್ಯಾಂಪಸ್ ನಲ್ಲಿ ಎಂ.ಎ ಕನ್ನಡ ವ್ಯಾಸಂಗವನ್ನು ಪೂರ್ಣಗೊಳಿಸಿದ್ದಾರೆ.

Exit mobile version