Site icon Kannada News-suddikshana

ಕಾಲೇಜು ಯುವತಿಯರ ಮೇಲೆ ಆ್ಯಸಿಡ್ ದಾಳಿ: 10 ವರ್ಷ ವ್ಯಕ್ತಿಗೆ ಜೈಲು ಶಿಕ್ಷೆ

SUDDIKSHANA KANNADA NEWS/ DAVANAGERE/ DATE:29-12-2023

ಮಧುರೈ: ಕಾಲೇಜು ಯುವತಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ ವ್ಯಕ್ತಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ

ಕಾಲೇಜು ಯುವತಿಯರ ಮೇಲೆ ಆಸಿಡ್ ಎರಚಿದ ವ್ಯಕ್ತಿಗೆ ಮಧುರೈ ಮಹಿಳಾ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಕಾಲೇಜು ಯುವತಿಯರನ್ನೇ ಟಾರ್ಗೆಟ್ ಮಾಡಿ ಆಸಿಡ್ ಎರಚಿದ ವ್ಯಕ್ತಿಯೊಬ್ಬನಿಗೆ ಮಧುರೈ ಮಹಿಳಾ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ತಿರುಮಂಗಲಂನ ಎಸ್ ಶಂಕರನಾರಾಯಣನ್ ಅವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. 2014ರಲ್ಲಿ ತಿರುಮಂಗಲಂನ ಕಾಲೇಜು ಬಳಿ ಇಬ್ಬರು ಕಾಲೇಜು ವಿದ್ಯಾರ್ಥಿಗಳ ಮೇಲೆ ಆಸಿಡ್ ಎರಚಿದ್ದ.

ಮೀನಾ ಮತ್ತು ಅಂಗಲೇಶ್ವರಿ ಅವರಿಗೆ ಕ್ರಮವಾಗಿ ಶೇ.25 ಮತ್ತು ಶೇ.15ರಷ್ಟು ಸುಟ್ಟ ಗಾಯಗಳೊಂದಿಗೆ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಪ್ರಕರಣದ ಸ್ವರೂಪ ಮತ್ತು ಇಬ್ಬರು ಮಹಿಳೆಯರು
ಅನುಭವಿಸಿದ ದೈಹಿಕ ಮತ್ತು ಮಾನಸಿಕ ಯಾತನೆಯನ್ನು ಪರಿಗಣಿಸಿದ ನ್ಯಾಯಾಲಯ, ಶಿಕ್ಷೆಯ ವಿಷಯದಲ್ಲಿ ಸೌಮ್ಯವಾದ ದೃಷ್ಟಿಕೋನವನ್ನು ತೆಗೆದುಕೊಳ್ಳುವುದು ಸೂಕ್ತ ಪ್ರಕರಣವಲ್ಲ ಮತ್ತು ಕಠಿಣ ಶಿಕ್ಷೆಯ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗೆ ರೂ. 40,000 ದಂಡವನ್ನೂ ವಿಧಿಸಿದೆ ಎಂದು ಅವರು ತಿಳಿಸಿದ್ದಾರೆ.

Exit mobile version