ಬೆಂಗಳೂರು: ಎಐಸಿಸಿ ಅಧ್ಯಕ್ಷ, ರಾಜ್ಯ ಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿಗೊಳಿಸಿ ಎಂದು ಅತ್ಯಂತ ದಯನೀಯ ಸ್ಥಿತಿಯಲ್ಲಿ ಬೇಡಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.
1970ರಿಂದಲೂ ಅಧಿಕಾರದಲ್ಲಿರುವ, ಕೇಂದ್ರ ಸಚಿವ, ರಾಜ್ಯ ಸಚಿವರಾದರೂ ಮತ್ತು ಕಲ್ಯಾಣ ಕರ್ನಾಟಕದ ಅತ್ಯಂತ ಪ್ರಭಾವಿ ಏಕಮಾತ್ರ ನಾಯಕ ಎಂದೆನಿಸಿಕೊಂಡರೂ, ಮೊದಲ ಬಾರಿಗೆ ಗೆದ್ದ ತಮ್ಮ ಪುತ್ರನನ್ನು ಸಚಿವನನ್ನಾಗಿ ಮಾಡಿದರೂ, ಕಲ್ಯಾಣ ಕರ್ನಾಟಕ ಇನ್ನೂ ಹಿಂದುಳಿದಿರುವುದೇಕೆ ಎಂದು ಖರ್ಗೆ ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿ ಎಂದು ಟೀಕಿಸಿದೆ.
ಗ್ಯಾರಂಟಿಯ ಹಿಂದೆ ಜೋತುಬಿದ್ದು ಖಜಾನೆ ಖಾಲಿ ಮಾಡಿಕೊಂಡು ಕುಳಿತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ ಎನ್ನುವುದು ಎಐಸಿಸಿ ಅಧ್ಯಕ್ಷರ ಮಾತಿನಿಂದಲೇ ಸ್ಪಷ್ಟವಾಗುತ್ತಿದೆ ಎಂದು ಬಿಜೆಪಿ ಎಕ್ಸ್ ಖಾತೆಯಲ್ಲಿ
ಆರೋಪಿಸಿದೆ.





Leave a comment