Home ದಾವಣಗೆರೆ ಮಕರ ಸಂಕ್ರಾಂತಿ ಮಾಹಿತಿ: ಜನ್ಮ ನಕ್ಷತ್ರ ಮೇಲೆ ಸಂಕ್ರಾಂತಿ ಫಲ ಏನು? ಪಾಪನಾಶವಾಗಿ ಪುಣ್ಯ ಪಡೆಯಲು ಏನು ಮಾಡಬೇಕು?
ದಾವಣಗೆರೆದಿನ ಭವಿಷ್ಯನವದೆಹಲಿಬೆಂಗಳೂರು

ಮಕರ ಸಂಕ್ರಾಂತಿ ಮಾಹಿತಿ: ಜನ್ಮ ನಕ್ಷತ್ರ ಮೇಲೆ ಸಂಕ್ರಾಂತಿ ಫಲ ಏನು? ಪಾಪನಾಶವಾಗಿ ಪುಣ್ಯ ಪಡೆಯಲು ಏನು ಮಾಡಬೇಕು?

Share
Share

ಶ್ರೀ ಶಕೆ 1947 ಶ್ರೀ ವಿಶ್ವವಾಸು ನಾಮ ಸಂವತ್ಸರದ ಮಕರ ಸಂಕ್ರಾಂತಿಯ ಪುಣ್ಯಫಲ:

ದಿನಾಂಕ 14 /01/2026 ರಂದು ಮಕರ ಸಂಕ್ರಾಂತಿಯ ಹಬ್ಬದ ಆಚರಣೆ.

ಅಂದು ( ಅನುರಾಧ ನಕ್ಷತ್ರ ನಾಮ – ಮಂದಾಕಿನಿ ) ( ಬುದುವಾರ ವಾರನಾಮ – ಮಹೋದರಿ )
ವಾಹನ : ಹುಲಿ
ಉಪವಾಹನ : ಕುದುರೆ

ಶ್ರೀ ಶಾಲಿವಾಹನ ಶಕೆ 1947, ಶ್ರೀ ವಿಶ್ವವಾಸು ನಾಮ ಸಂವತ್ಸರ, ಪುಷ್ಯ ಮಾಸ, ಕೃಷ್ಣ ಪಕ್ಷ, ಏಕಾದಶಿ ಥಿತಿ, ಬುಧವಾರ, ದಿನಾಂಕ 14/01/2026 ರಂದು 21 ಘಟಿ, 09 ಪಳಕ್ಕೆ ಅಂದರೆ ಅಂದು ಮಧ್ಯಾಹ್ನ 03 – 08ಕ್ಕೆ ಅನುರಾಧ ನಕ್ಷತ್ರ, ಗಂಡ ಯೋಗ, ಬಾಲವ ಕರಣದಲ್ಲಿ, ಸೂರ್ಯನಾರಾಯಣನು ಧನು ರಾಶಿಯನ್ನು ಬಿಟ್ಟು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ.

ಸಂಕ್ರಾಂತಿ ಪುಣ್ಯಕಾಲ:

ದಿನಾಂಕ 14/01/2026ನೇ ಬುಧವಾರ ಮಧ್ಯಾಹ್ನ : 03 – 08 ರಿಂದ ಸೂರ್ಯ ಅಸ್ತದವರೆಗೂ ಪರ್ವ ಪುಣ್ಯಕಾಲದ ಆಚರಣೆಯನ್ನು ಮಾಡಬೇಕು.

ಸಂಕ್ರಾಂತಿ ಸ್ವರೂಪ:

ಕೌಮರಾವಸ್ಥೆಯ ಭೂತಜಾತಿಯ ಕುರಿತ ಸ್ಥಿತಿಯಲ್ಲಿ ಇರುವ ಸಂಕ್ರಾಂತಿ ದೇವಿಯು ಪೂರ್ವದಿಂದ ಬಂದು, ದಕ್ಷಿಣಕ್ಕೆ ಮುಖ ಮಾಡಿ, ವಾಯುವ್ಯ ಮೂಲೆಗೆ ದೃಷ್ಟಿಯನ್ನು ಇಟ್ಟು, ಪಶ್ಚಿಮ ದಿಕ್ಕಿನ ಕಡೆಗೆ ಹೊರಟಿದ್ದಾಳೆ, ಹಳದಿ ಬಣ್ಣದ ಹತ್ತಿ ಬಟ್ಟೆ ತೊಟ್ಟು, ಗದಾಯುಧ, ಕಂಕಣ ಧರಿಸಿ, ಬೆಳ್ಳಿ ಪಾತ್ರೆಯಲ್ಲಿ ಪಾಯಸವನ್ನು ಉಂಡು, ಮುತ್ತಿನ ಹಾರ, ಮಲ್ಲಿಗೆ ಪುಷ್ಪ, ಕುಂಕುಮದಿಂದ ಅಲಂಕೃತಳಾಗಿದ್ದಾಳೆ. ಈ ಸಲದ ಫಲ ಸಂಕ್ರಾಂತಿಗೇ ದೇವಿಯು ಉಪಯೋಗಿಸಿದ ವಸ್ತುಗಳು ಬಹಳಷ್ಟು ದುಬಾರಿಯಾಗುತ್ತದೆ. ಅಥವಾ ಹಾನಿಯಾಗುತ್ತವೆ. ಬರುವ ದಿಕ್ಕಿನಲ್ಲಿ ಸೌಖ್ಯವು, ಹೋಗುವ ದಿಕ್ಕಿನಲ್ಲಿ ದುಃಖವು, ಮತ್ತು ದೃಷ್ಟಿಸುವ ದಿಶೆಯಲ್ಲಿ ಹಾನಿಯ ಫಲಗಳಿರುತ್ತವೆ.

ಸಂಕ್ರಾಂತಿಯ ಪುಣ್ಯ ಕಾಲ:

(ಸೂರ್ಯ ಸಿದ್ಧಾಂತ ) ಸೂರ್ಯ ಸಿದ್ಧಾಂತದ ಪ್ರಕಾರ ಬುಧವಾರ 36 ಘಟಿ, 01 ಪಳ ಅಂದರೆ ರಾತ್ರಿ 09- 05ಕ್ಕೆ ಕೌಲವ ಕಾರಣದಲ್ಲಿ ಸಂಕ್ರಾಂತಿ ಪ್ರವೇಶ ಇರುವುದರಿಂದ ಗುರುವಾರ ದ್ವಾದಶಿ ಸೂರ್ಯೋದಯದಿಂದ ಮಧ್ಯಾಹ್ನ :01-05 ರ ವರೆಗೆ ಪುಣ್ಯಕಾಲ ಹಾಗೂ ಹಬ್ಬ ಇರುವುದು. ಸ್ನಾನ, ದಾನ, ಪಿತ್ರಾರ್ಪಣ ಮೊದಲಾದ ಕರ್ತವ್ಯವನ್ನು ಪುಣ್ಯಕಾಲದಲ್ಲಿ ಆಚರಿಸಬೇಕು.

ಜನ್ಮ ನಕ್ಷತ್ರ ಮೇಲಿಂದ ಸಂಕ್ರಾಂತಿಯ ಫಲ:

1) ಪಂಥ : ವಿಶಾಖ, ಅನುರಾಧ, ಜೇಷ್ಠ
2) ಭೋಗ : ಮೂಲ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಧನಿಷ್ಠ, ಮತ್ತು ಶತತಾರ,
3) ಚಿಂತಾ : ಪೂರ್ವಭಾದ್ರಪದ, ಉತ್ತರಾಭಾದ್ರಪದ, ರೇವತಿ,
4) ವಸ್ತ್ರ : ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ, ಮೃಗಶಿರ, ಆರಿದ್ರ,
5) ಹಾನಿ : ಪುನರ್ವಸು, ಪುಷ್ಯ, ಆಶ್ಲೇಷ,
6) ವಿಫಲ ಧನ : ಮಘ, ಹಸ್ತ, ಚಿತ್ತ, ಪೂರ್ವ ( ಹುಬ್ಬ ), ಉತ್ತರ, ಸ್ವಾತಿ.

ಪರ್ವಕಾಲದಲ್ಲಿ ಎಳ್ಳಿನ ಉಪಯೋಗ:

ಈ ಪರ್ವಕಾಲದಲ್ಲಿ ಯಾರು ವಿಧದಲ್ಲಿ ಎಳ್ಳಿನ ಉಪಯೋಗವನ್ನು ಮಾಡುತ್ತಾರೋ ಅಂತವರ ಪಾಪನಾಶವಾಗಿ ಪುಣ್ಯಫಲವನ್ನು ಸಂಪಾದಿಸುತ್ತಾರೆ.

1) ಎಳ್ಳು ಮಿಶ್ರಿತ ನೀರಿನಿಂದ ಸ್ನಾನ ಮಾಡುವುದು.
2) ಎಳ್ಳಿನ ಕಲ್ಕದಿಂದ ಮೈ ಕೈ ತಿಕ್ಕಿಕೊಳ್ಳುವುದು
3) ಎಳ್ಳಿನ ಹೋಮ ಮಾಡುವುದು
4) ಎಳ್ಳು ಮಿಶ್ರಿತ ನೀರಿನ ಸೇವನೆ ಮಾಡುವುದು.
5) ಎಳ್ಳನ್ನು ಗುರುಗಳಿಗೆ ಇಲ್ಲವೇ ಬ್ರಾಹ್ಮಣರಿಗೆ ದಾನ ಕೊಡುವುದು
6) ಎಳ್ಳನ್ನು ಸೇವಿಸುವುದು

ಹೀಗೆ ಆರು ರೀತಿಯಲ್ಲಿ ಎಳ್ಳನ್ನು ಉಪಯೋಗಿಸಿದರೆ ಅವರಿಗೆ ಪುಣ್ಯಪ್ರಾಪ್ತಿ ಆಗುತ್ತದೆ ಹಾಗೂ ಅನೇಕ ದೋಷಗಳು ಪರಿಹಾರವಾಗುತ್ತದೆ.

ವಿಶೇಷ ಸೂಚನೆ:

ಪರ್ವಕಾಲದಲ್ಲಿ ಎಳ್ಳಿನ ಉಪಯೋಗ ಮಾಡುವಾಗ ಈ ಶ್ಲೋಕವನ್ನು ತಪ್ಪದೇ ಹೇಳಬೇಕು.

ಶ್ಲೋಕ : ತಿಲಸ್ನಾಯಿ ತಿಲೋದ್ವರ್ತಿ ತಿಲಹೋಮಿ ತೀಲ ತರ್ಪಣ |
ತಿಲ ಭುಕ್ ತೀಲದಾತಾಚ ಷಟ್ ತಿಲಾ: ಪಾಪನಾಶನ : ||

ತಮಗೆ ಈ ಬರೆದಿರುವಂತಹ ಸಾರಾಂಶಗಳಲ್ಲಿ ಏನಾದರೂ ಗೊಂದಲಗಳು ಇದ್ದರೆ ನಮ್ಮ ನಂಬರಿಗೆ ಫೋನ್ ಮಾಡಿ ತಿಳಿದುಕೊಳ್ಳಿ. ನಮಸ್ಕಾರಗಳು

ಮತ್ತೊಮ್ಮೆ ಮಗದೊಮ್ಮೆ ತಮ್ಮೆಲ್ಲರಿಗೂ ಬರುವಂತಹ ಮಕರ ಸಂಕ್ರಾಂತಿಯ ಪುಣ್ಯಪ್ರಾಪ್ತಿ ಆಗಲಿ ಎಂದು ಶ್ರೀಮನ್ನಾರಾಯಣ ನಲ್ಲಿ ಹಾಗೂ ಸೂರ್ಯನಾರಾಯಣದಲ್ಲಿ ಕೇಳಿಕೊಳ್ಳುವೆ ನಮಸ್ಕಾರಗಳು.

ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Share

Leave a comment

Leave a Reply

Your email address will not be published. Required fields are marked *