Site icon Kannada News-suddikshana

BIG NEWS: ಮಡೆನೂರು ಮನು ಹಾಳಾಗಲು ಆತನ ಪತ್ನಿ ಕಾರಣ – ಸಂತ್ರಸ್ತೆ ಆರೋಪ: ಆರೋಪಿ ಪತ್ನಿ ಹೇಳಿದ್ದೇನು?

SUDDIKSHANA KANNADA NEWS/ DAVANAGERE/ DATE-23-05-2025

ಬೆಂಗಳೂರು: ಅತ್ಯಾಚಾರ ಕೇಸ್ ನಲ್ಲಿ ಬಂಧಿತನಾಗಿರುವ ಮಡೆನೂರು ಮನು ಹಾಳಾಗಿ ಹೋಗಲು ಆತನ ಪತ್ನಿ ಕಾರಣ ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಬಳಿ ಬಂದಿರುವುದಕ್ಕೆ ಸಾಕ್ಷಿಗಳಿವೆ. ಲೈಂಗಿಕ ದೌರ್ಜನ್ಯ, ಖಾಸಗಿ ವಿಡಿಯೋಗಳು ಇವೆ. ಹಾಗಿದ್ದರೆ ಷಡ್ಯಂತ್ರ ಎಲ್ಲಿಂದ ಬರುತ್ತೆ ಎಂದು ಪ್ರಶ್ನಿಸಿದ್ದಾರೆ.

ಯಾವುದೇ ಗಂಡ ದಾರಿ ತಪ್ಪಿದರೂ ಪತ್ನಿ ಯಾಕೆ ತಿದ್ದಲಿಲ್ಲ. ಮನೆಯಿಂದ ಹೊರಗೆ ಇದ್ದಾಗ ಏನೂ ಬೇಕಾದರೂ ಮಾಡಿಕೋ. ಮನೆಯಲ್ಲಿದ್ದಾಗ ಸರಿಯಾಗಿರು ಎಂದು ಹೇಳಿದ್ದಾರೆ. ಆಕೆ ಮನೆಯಲ್ಲಿ ಬೆಚ್ಚಗಿದ್ದಾರೆ. ನನ್ನ ಬದುಕು ಬೀದಿಗೆ ಬಂದಿದೆ ಎಂದು ಆರೋಪಿಸಿದ್ದಾರೆ.

ಪತ್ನಿಯಿಂದಲೇ ಮನು ಹಾಳಾಗಿ ಹೋಗಿರುವುದು. ಯಾವುದೇ ಕಾರಣಕ್ಕೂ ನಾನು ಮತ್ತೆ ಒಪ್ಪಲ್ಲ. ಮನು ಪತ್ನಿ ಮಾತನಾಡಿರುವ ಆಡಿಯೋ ರೆಕಾರ್ಡ್ ಇದೆ. ಆಕೆ ಮಾತನಾಡಿರುವುದು ಇದೆ. ಆತನೂ ಮಾತನಾಡಿರುವುದು ಇದೆ. ಸದ್ಯದಲ್ಲಿಯೇ ಎಲ್ಲರಿಗೂ ಕಳುಹಿಸಿಕೊಡುತ್ತೇನೆ ಎಂದು ಗುಡುಗಿದ್ದಾರೆ.

ನನ್ನ ಬಳಿ ಸಾಕ್ಷಿ ಇದ್ದ ಮೇಲೆ ಯಾಕೆ ಕೇಸ್ ವಾಪಸ್ ಪಡೆಯಬೇಕು. ಮಡೆನೂರು ಪತ್ನಿ ತಿರುಗೇಟು ನೀಡಿದ್ದು, ನನ್ನ ಪತಿ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಈಗ ಯಾಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸಿನಿಮಾಗೋಸ್ಕರ ಟಾರ್ಗೆಟ್ ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ಮಡೆನೂರು ಮನು ವಿರುದ್ಧ ಇಂಥ ಆರೋಪ ಮಾಡಿರುವುದು ನೋವು ತಂದಿದೆ. ಇದೆಲ್ಲಾ ಬೇಕಿತ್ತಾ? ಸಿನಿಮಾ ಬಿಡುಗಡೆ ಮುನ್ನ, ಈ ಹಿಂದೆ ಆಗಿದ್ದಾಗ ಆರೋಪ ಮಾಡಬಹುದಿತ್ತು. ನನ್ನ ಗಂಡ ತಪ್ಪು ಮಾಡಿಲ್ಲ. ನನ್ನ ಗಂಡನನ್ನು ಬಿಟ್ಟುಕೊಡಲ್ಲ ಎಂದು ಹೇಳಿದ್ದಾರೆ.

Exit mobile version