Site icon Kannada News-suddikshana

ಮಾಡಾಳ್ ವಿರೂಪಾಕ್ಷಪ್ಪ ಅರೆಸ್ಟ್: ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದ ಬಿಜೆಪಿ ಶಾಸಕ

 

ದಾವಣಗೆರೆ: ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (MADAL VIRUPAKSHAPPA)  ಬಂಧನ (ARRREST) ಆಗಿದೆ.

ತುಮಕೂರು ಬಳಿಯ ಟೋಲ್ ನಲ್ಲಿ ಅರೆಸ್ಟ್ ಆಗಿದ್ದು, ಈ ಮೂಲಕ ಬಿಜೆಪಿ ಶಾಸಕನ ಬಂಧನವಾಗಿದೆ. ಲೋಕಾಯುಕ್ತ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಲು ಹೋಗುವಾಗ ಲೋಕಾಯುಕ್ತ ಪೊಲೀಸರ ಚಾಣಾಕ್ಷತನದಿಂದ ಬಂಧನವಾಗಿದೆ.

ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ 351 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳ
ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಹಾಜರಿದ್ದು ಮಾತನಾಡಿದರು.

ಮಾಧ್ಯಮದವರು ಸಹ ಈ ಕಾರ್ಯಕ್ರಮಕ್ಕೆ ತೆರಳಿದ್ದರು. ದಾವಣಗೆರೆ ಮಾಧ್ಯಮದವರೂ ಹೋಗಿದ್ದರು. ವೇದಿಕೆ ಮುಂಭಾಗ ಮಾಧ್ಯಮದವರು ಇದ್ದರೂ ಲೋಕಾಯುಕ್ತ ದಾಳಿ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ. ನನ್ನ ರಾಜಕಾರಣದಲ್ಲಿ ಇದುವರೆಗೆ ಒಂದೇ ಒಂದು ಕಪ್ಪು ಚುಕ್ಕೆ ಇರಲಿಲ್ಲ. ನಾನು ತಪ್ಪು ಮಾಡದಿದ್ದರೂ ಇಂಥ ಪರಿಸ್ಥಿತಿ ಬಂತು ಎಂದು ಬೇಸರ ವ್ಯಕ್ತಪಡಿಸಿದರು.

ಚನ್ನಗಿರಿ ಕ್ಷೇತ್ರದಲ್ಲಿ ಶಾಸಕನಾದಾಗಿನಿಂದಲೂ ಅಭಿವೃದ್ಧಿ ಕೆಲಸಗಳತ್ತ ಗಮನ ನೀಡಿದ್ದೆ. ರಸ್ತೆ ಸೇರಿದಂತೆ ತಾಲೂಕಿನಾದ್ಯಂತ ಮೂಲಭೂತ ಸೌಲಭ್ಯ ಕಲ್ಪಿಸಿಕೊಟ್ಟಿದ್ದೇನೆ. ಈಗ ಮೂರು‌ನೂರು ಕೋಟಿ ರೂಪಾಯಿಗೂ ಅಧಿಕ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಇದು ಖುಷಿಯ ವಿಚಾರ. ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿವೆ. ಮೊದಲಿನಿಂದಲೂ ನೀವು ನನ್ನ ಬೆಂಬಲಿಸಿದ್ದೀರಾ. ಮುಂದೆಯೂ ಬೆಂಬಲ ನೀಡುತ್ತೀರಾ ಎಂಬ ವಿಶ್ವಾಸ ಇದೆ ಎಂದರು.

ವೇದಿಕೆಯಲ್ಲಿಯೇ ಇದ್ದ ಮಾಡಾಳ್ ವಿರೂಪಾಕ್ಷಪ್ಪ ಸರ್ಕಾರಿ‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೋದವರು ನಂತರ ಯಾರ ಕೈಗೂ ಸಿಗಲಿಲ್ಲ. ಬೆಂಗಳೂರಿನಲ್ಲಿ ಲೋಕಾಯುಕ್ತ ದಾಳಿ ವೇಳೆ ಕೋಟಿ ಕೋಟಿ ರೂಪಾಯಿ ಹಣ ಪತ್ತೆಯಾಗಿತ್ತು. ಪ್ರಶಾಂತ್ ಮಾಡಾಳ್ ರೆಡ್ ಹ್ಯಾಂಡ್ ಆಗಿ 2 ಕೋಟಿ ರೂಪಾಯಿಗೂ ಹೆಚ್ಚು ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದರು. ಆ ಬಳಿಕ ಪುತ್ರನ ಮನೆಯಲ್ಲಿ 6.20 ಕೋಟಿ ರೂಪಾಯಿ ಸಿಕ್ಕಿತ್ತು.

ಲೋಕಾಯುಕ್ತ ವರದಿ ನೀಡುವವರೆಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶಿಸಿತ್ತು. ಆದ್ರೆ ಇಂದು ಹೈಕೋರ್ಟ್ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದಾರೆ. ಅಂತೂ ಶಾಸಕರ ಬಂಧನವಾಗಿದೆ.

 

Exit mobile version