Home ಕ್ರೈಂ ನ್ಯೂಸ್ BIG BREAKING: ‘ಕೊರಳಪಟ್ಟಿ ಹಿಡಿದು ಕೇಳ್ತೇನೆಂದಿದ್ದ” ಹೆಚ್. ಬಿ. ಮಂಜಪ್ಪ ವಿರುದ್ಧ ಪೊಲೀಸ್ ಮಹಾನಿರ್ದೇಶಕರಿಗೆ ಎಂ. ಪಿ. ರೇಣುಕಾಚಾರ್ಯ ದೂರು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

BIG BREAKING: ‘ಕೊರಳಪಟ್ಟಿ ಹಿಡಿದು ಕೇಳ್ತೇನೆಂದಿದ್ದ” ಹೆಚ್. ಬಿ. ಮಂಜಪ್ಪ ವಿರುದ್ಧ ಪೊಲೀಸ್ ಮಹಾನಿರ್ದೇಶಕರಿಗೆ ಎಂ. ಪಿ. ರೇಣುಕಾಚಾರ್ಯ ದೂರು!

Share
Share

ದಾವಣಗೆರೆ: ಪದೇ ಪದೇ ಗೂಂಡಾ, ರೌಡಿ ಅಧ್ಯಕ್ಷನೆಂದು ನನ್ನನ್ನು ಕರೆದರೆ ಯಾವ ಸಮಾರಂಭದಲ್ಲಿ ಮಾಜಿ ಸಚಿವ ಹಾಗೂ ಹೊನ್ನಾಳಿ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಭಾಗಿಯಾಗುತ್ತಾರೋ ಆ ಕಾರ್ಯಕ್ರಮಕ್ಕೆ ಹೋಗಿ ಕೊರಳಪಟ್ಟಿ ಹಿಡಿದು ಎಳೆದು ಕೇಳುವ ಶಕ್ತಿ ನನಗಿದೆ ಎಂದಿದ್ದ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬಯಲು ಸೀಮೆ ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್. ಬಿ. ಮಂಜಪ್ಪರ ವಿರುದ್ಧ ಬೆಂಗಳೂರಿನಲ್ಲಿ ಎಂ. ಪಿ. ರೇಣುಕಾಚಾರ್ಯ ಅವರು ಪೊಲೀಸ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.

READ ALSO THIS STORY: ‘ಮಕ್ಕಳಿಲ್ಲದ ಮಹಿಳೆಯರನ್ನ ಗರ್ಭಿಣಿಯಾಗಿಸಿ 10 ಲಕ್ಷ ರೂ. ಬಹುಮಾನ ಪಡೆಯಿರಿ’: ‘ಅಖಿಲ ಭಾರತ ಗರ್ಭಿಣಿ ಸೇವೆ’ ಏನಿದು ಆಫರ್?

ನನ್ನ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಹೆಚ್. ಬಿ. ಮಂಜಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕರಿಗೆ ಲಿಖಿತ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಬಿಜೆಪಿ ಮುಖಂಡರು, ಬಿಜೆಪಿ ಹೊನ್ನಾಳಿ ಮಂಡಲ ಅಧ್ಯಕ್ಷರು ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು ಹಾಜರಿದ್ದರು.

ಗೌರವಯುತವಾಗಿ ಮಾತನಾಡಿ: ಬಿಜೆಪಿ ಕಾರ್ಯಕರ್ತ ವಿಡಿಯೋ

ದಾವಣಗೆರೆ ಕಾಂಗ್ರೆಸ್ ಜಿಲ್ಲಾ ಪಕ್ಷದ ಅಧ್ಯಕ್ಷರೇ ಸೋಲು ಗೆಲುವು ಅನಿವಾರ್ಯ. ಇದರ ಬಗ್ಗೆ ನಾನು ಹೆಚ್ಚಿಗೆ ಹೇಳುವುದಿಲ್ಲ ಆದರೆ ನಿಮಗೆ ನಿಮ್ಮದೇ ಆದ ಗೌರವವಿದೆ. ಆದರೆ ನೀವು ಮಾತನಾಡುತ್ತಾ ಇರೋದು ನೋಡಿದ್ರೆ ನನಗೆ ತುಂಬಾ ನಗು ಬರುತ್ತಿದೆ. ನಮ್ಮ ನಾಯಕರ ಬಗ್ಗೆ ತುಂಬಾ ಹಗುರವಾಗಿ ಮಾತನಾಡುವ ಯಾವ ನೈತಿಕತೆಯು ನಿಮಗೆ ಇಲ್ಲ. ನಿಮ್ಮ ಪಕ್ಷದ ಶಾಸಕರು ಜಾತಿ ಮತಗಳಿಂದ ಗೆಲ್ಲುತ್ತಾ ಬಂದಿದ್ದಾರೆ. ಆದರೆ ನಮ್ಮ ನಾಯಕರು ಅಭಿವೃದ್ಧಿಯಿಂದ ಗೆಲ್ಲುತ್ತಾ ಬಂದಿದ್ದಾರೆ. ನಿಮಗೆ ನಾಚಿಕೆ ಆಗಬೇಕು ಬೀದಿಯಲ್ಲಿ ನಿತ್ಕೊಂಡು ಬೀದಿ ದೀಪಗಳ ಬಗ್ಗೆ ಮಾತನಾಡುತ್ತೀರಲ್ಲ. ನಿಮ್ಮ ಶಾಸಕರ ಅವಧಿಯಲ್ಲಿ ಹಾಗೂ ನಮ್ಮ ಶಾಸಕರ ಅವಧಿಯಲ್ಲಿ ಎಷ್ಟೆಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ಚರ್ಚೆ ಮಾಡೋಣವೇ? ಎಂದು ಬಿಜೆಪಿ ಕಾರ್ಯಕರ್ತ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ.

ನೀವು ಅಧಿಕಾರಕ್ಕೆ ಬಂದು 2.6ವರ್ಷವಾದರೂ ನಿಮ್ಮಿಂದ ಯಾಕೆ ಆನ್ ಮಾಡಲು ಆಗಿಲ್ಲ. ನಮ್ಮ ಸಮಾಜದ ಜಮೀನುಗಳನ್ನು ಸೋಲಾರ್ ಪ್ಲಾಂಟಿಗೆ ಮಾಡಲು ನಮ್ಮ ನಾಯಕರು ಕಾರಣ ಅಂತ ಹೇಳುತ್ತಿದ್ದೀರಲ್ಲ. ಅಧಿಕಾರದಲ್ಲಿ ಇದ್ದು ನೀವೇನು ಮಾಡಿದ್ದು ನಿಮ್ಮ ಸಮಾಜದ ಜನರ ಜಮೀನನ್ನೇ ಉಳಿಸಲು ಆಗದಿದ್ದವರು. ನಿಮ್ಮ ರಾಜಕೀಯ ಜೀವನಕ್ಕೆ ನೀವು ರಾಜೀನಾಮೆ ಕೊಡಬೇಕು. ಏಕೆಂದರೆ ತಾಲ್ಲೂಕಿನ ಅಭಿವೃದ್ಧಿ ಹೇಗೆ ಮಾಡುವಿರಿ ನೀವು ಸುಮ್ನೆ ಮಾತನಾಡಲು ಬರುತ್ತೆ ಅಂತ ಹೇಳಿ ಏನೇನೋ ಮಾತನಾಡಬೇಡಿ.

ದಯವಿಟ್ಟು ಇದು ಸಂವಿಧಾನ ದೇಶ ಎಲ್ಲರೂ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನೆನಪಿರಲಿ ಹೋರಾಟ ಮಾಡುವುದು ಪ್ರತಿಯೊಬ್ಬನ ಹಕ್ಕು. ಹೋರಾಟ ಮಾಡುತ್ತಿರುವವರ ಮೇಲೆ ಬಂದು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದೀರಿ.ಗೂಂಡ ಅಧ್ಯಕ್ಷರು ಅಂತ ಅನ್ನುವುದು ತಪ್ಪಲ್ಲ ಅನಿಸುತ್ತಿದೆ. ಎಲ್ಲವನ್ನು ಈ ತಾಲೂಕಿನ ಜನ ನೋಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ತಮಗೆ ಪ್ರತ್ಯುತ್ತರ ಕೊಡಲು ಕಾಯುತ್ತಿದ್ದೇವೆ. ಇದೇ ಕೊನೆ ನಮ್ಮ ನಾಯಕರು ಬಗ್ಗೆ ಹಗುರವಾಗಿ ಮಾತನಾಡಿದರೆ ನಾವು ಏನು ಮಾಡುತ್ತೇವೆ ಅನ್ನೋದನ್ನ ತೋರಿಸುತ್ತೇವೆ. ನಮ್ಮ ನಾಯಕರೇ ನಮ್ಮ ಹೆಮ್ಮೆ ಎಂದು ಬಿಜೆಪಿ ಕಾರ್ಯಕರ್ತನೊಬ್ಬ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ.

ಮುಂದಿನ ದಿನಗಳಲ್ಲಿ ನನ್ನ ಬಗ್ಗೆ ಅಥವಾ ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರುಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ಅವನ ಭಾಷೆಯಲ್ಲೇ ಉತ್ತರ ನೀಡುತ್ತೇನೆ ಎಂದು ಏಕವಚನದಲ್ಲಿಯೇ ಹೆಚ್. ಬಿ. ಮಂಜಪ್ಪರಿಗೆ ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles