Site icon Kannada News-suddikshana

ಹುಂಡೈ ಶೋ ರೂಂ ಟೀಂನಿಂದ ಎಂ. ಗುರುಸಿದ್ದಸ್ವಾಮಿ, ಆರ್. ಎಂ. ಜಾವೀದ್ ರಿಗೆ ಸನ್ಮಾನ

ಸನ್ಮಾನ

SUDDIKSHANA KANNADA NEWS/ DAVANAGERE/DATE:06_09_2025

ದಾವಣಗೆರೆ: ಕೆ. ಜೆ. ಹುಂಡೈ ಶೋ ರೂಂನಲ್ಲಿ ಸ್ವತಂತ್ರ ಭಾರತದ ಎರಡನೇ ರಾಷ್ಟ್ರಪತಿ, ಮಹಾನ್ ಶಿಕ್ಷಣ ಪ್ರೇಮಿ, ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಜನುಮದಿನದ ಪ್ರಯುಕ್ತ ಶಿಕ್ಷಕ ದಿನಾಚರಣೆಯಂದು ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

READ ALSO THIS STORY: ಖಾಲಿ ನಿವೇಶನ ಮಾಲೀಕರೇ ಗಮನಿಸಿ… ಕಾಂಪೌಂಡ್, ತಡೆಗೋಡೆ ನಿರ್ಮಾಣ ಮಾಡಿಕೊಳ್ಳುವಂತೆ ಆಯುಕ್ತೆ ಸೂಚನೆ

ಕರ್ನಾಟಕ ರಾಜ್ಯ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ, ಎಆರ್ ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಆರ್. ಎಂ. ಜಾವೀದ್ ಸೇರಿದಂತೆ ಒಟ್ಟು 50 ಶಿಕ್ಷಕರನ್ನು ಕೆ. ಜೆ. ಹುಂಡೈ
ಶೋ ರೂಂ ತಂಡದ ವತಿಯಿಂದ ಸನ್ಮಾನಿಸಲಾಯಿತು.

ಈ ವೇಳೆ ಕೆ. ಜಾವೀದ್, ಅಫ್ತಾಕ್ ರಜ್ವಿ ಕೆ. ಜೆ., ಅಬ್ರಹಾರ್ ಕೆ. ಜೆ. ಮತ್ತಿತರರು ಹಾಜರಿದ್ದರು.

Exit mobile version